ಹುಳಿಯಾರು
ನಾನ್ಯಾವುದೇ ವ್ಯಾಪಾರ ಸಾಲ ಪಡೆಯದಿದ್ದರೂ ಆಡಿಟ್ ದಾಖಲೆಯ ವ್ಯಾಪಾರ ಸಾಲದ ಕುಳುವಾರು ಪಟ್ಟಿಯಲ್ಲಿ ನನ್ನ ಹೆಸರಿದೆ ಎಂದು ಹುಳಿಯಾರು ಹೋಬಳಿ ಕೆಂಕೆರೆಯ ರೈತ ಎ.ಚನ್ನಬಸವಯ್ಯ ಅವರು ಆರೋಪಿಸಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೆಂಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇದೂವರೆವಿಗೂ ನಾನ್ಯಾವುದೇ ವ್ಯಾಪರ ಸಾಲ ಪಡೆದಿಲ್ಲ. ಆದರೂ 2018 ರ ಮಾರ್ಚ್ ಮಾಹೆಯ ಆಡಿಟ್ ದಾಖಲೆಯ ವ್ಯಾಪಾರ ಸಾಲದ ಕುಳುವಾರು ಪಟ್ಟಿಯಲ್ಲಿ ನಾನು 1 ಲಕ್ಷ ರೂ. ವ್ಯಾಪಾರ ಸಾಲ ಪಡೆದಿರುವುದಾಗಿ ನಮೂದಾಗಿದೆ. ಅಲ್ಲದೆ ನನ್ನೊಂದಿಗೆ ಇನ್ನೂ 14 ಮಂದಿ ಅಂದರೆ 15 ಮಂದಿಯ ತಲಾ 1 ಲಕ್ಷ ರೂ.ನಂತೆ ಒಟ್ಟು 15 ಲಕ್ಷ ರೂ. ವ್ಯಾಪಾರ ಸಾಲ ಕೊಟ್ಟಿರುವುದಾಗಿ ನಮೂದಾಗಿದೆ.
ಆದರೆ ನಾನು ಅಪ್ಪಟ ರೈತನಾಗಿದ್ದು ಯಾವುದೇ ವ್ಯಾಪರ ಮಾಡುತ್ತಿಲ್ಲ. ಹೀಗಿರುವಾಗ ನಾನ್ಯೇಕೆ ವ್ಯಾಪಾರ ಸಾಲ ಪಡೆಯಲಿ ಎಂದು ಪ್ರಶ್ನಿಸಿದ ಅವರು ಈ ಪಟ್ಟಿಯಲ್ಲಿರುವ ಅನೇಕರನ್ನು ಈಗಾಗಲೇ ನಾವು ಈ ಬಗ್ಗೆ ವಿಚಾರಿಸಿದಾಗ ಅವರೂ ಸಹ ಯಾವುದೇ ವ್ಯಾಪಾರ ಸಾಲ ಪಡೆದಿಲ್ಲ. ಪಟ್ಟಿಯಲ್ಲಿ ನಮ್ಮಗಳ ಹೆಸರನ್ನೇಕೆ ದಾಖಲಿಸಿದ್ದಾರೆ ತಿಳಿಯದು ಇದರಲ್ಲೇನೋ ಗೋಲ್‍ಮಾಲ್ ನಡೆದಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ನನಗೂ ಸಹ ನಮ್ಮಗಳ ಹೆಸರಿನಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ ಅನುಮಾನ ಮೂಡಿದೆ. ಹಾಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ ಸತ್ಯಾಸತ್ಯತೆಗಳನ್ನು ಹೊರಗೆಳೆದು ನಮ್ಮಲ್ಲಿ ಮೂಡಿರುವ ಆತಂಕ ದೂರಮಾಡುವಂತೆ ಮನವಿ ಮಾಡಿದ್ದಾರೆ.
ಕಾರ್ಯದರ್ಶಿ ಸ್ಪಷ್ಠನೆ: ಈ ಸಂಬಂಧ ಕೆಂಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರಾಜಣ್ಣ ಅವರನ್ನು ಪತ್ರಿಕೆ ಸ್ಪಷ್ಟನೆ ಕೇಳಲಾಗಿದ್ದು ಆಡಿಟ್ ಸಂದರ್ಬದಲ್ಲಿ 15 ಲಕ್ಷ ರೂ. ವ್ಯತ್ಯಾಸ ಕಂಡುಬಂತು. ಆಗ ವ್ಯಾಪಾರ ಸಾಲವೆಂದು 15 ಮಂದಿಯ ಹೆಸರು ಸೇರಿಸಿ ಆಡಿಟ್ ಮಾಡಿಸಲಾಗಿತ್ತು. ನಂತರದ ದಿನಗಳಲ್ಲಿ ವ್ಯತ್ಯಾಸವಿದ್ದ 15 ಲಕ್ಷ ರೂ. ಪತ್ತೆಹಚ್ಚಿದ್ದು ಪುನಃ ಆಡಿಟ್ ಮಾಡಿಸಿ ಸಾಲದ ಕುಳುವಾರು ಪಟ್ಟಿಯನ್ನು ಸಂಪೂರ್ಣ ವಜಾ ಮಾಡಿ ಲೆಕ್ಕಪತ್ರವನ್ನು ಸರಿದೂಗಿಸಲಾಗಿದ್ದು 15 ಮಂದಿ ಬಂದರೂ ಅವರಿಗೆ ಸಹಕಾರ ಸಂಘದ ಎನ್‍ಡಿಸಿ ಪತ್ರ ಕೊಡುತ್ತೇನೆ. ಹಾಗಾಗಿ ಯಾರೂ ಆತಂಕ ಪಡುವ ಅವತ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
