ಅಂಬೇಡ್ಕರ್‍ರವರ ತತ್ವಾದರ್ಶಗಳ ಪಾಲಿಕೆಯಲ್ಲಿ ರಾಜಕೀಯ ಶಕ್ತಿಗಳ ವಿಫಲತೆ ಶೋಷಣೆ ಜೀವಂತವಾಗಿರಲು ಕಾರಣ.

ಚಳ್ಳಕೆರೆ

         ಸಮಾಜದಲ್ಲಿ ಬೇರುಬಿಟ್ಟಿರುವ ಶೋಷಣೆ, ಬಡತನ, ಅಸ್ಪøಶ್ಯತೆಯನ್ನು ತೊಲಗಿಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಡೆಸಿದ ಹೋರಾಟ ನಿರೀಕ್ಷಿತ ಫಲನೀಡಿಲ್ಲ. ಕಾರಣ ಅಂಬೇಡ್ಕರ್‍ರವರ ಆಶಾಯಗಳನ್ನು ಈಡೇರಿಸುವಂತಹ ಅವರು ಹೊಂದಿದ್ದ ವಿಶೇಷ ಅಂತರಂಗದ ಕಳಕಳಿಯನ್ನು ಗುರುತಿಸುವ ಕಾರ್ಯ ನಮ್ಮ ರಾಜಕೀಯ ನಾಯಕರಲ್ಲಿ ಇದುವರೆಗೂ ನಡೆದಿಲ್ಲ. ಹಾಗಾಗಿ ಅಸ್ಪøಶ್ಯತೆ ಮತ್ತು ಶೋಷಣೆ ಮಾದಿಗ ಸಮುದಾಯವನ್ನು ಇನ್ನೂ ಕತ್ತಲಲ್ಲಿಟ್ಟಿದೆ ಎಂದು ಖ್ಯಾತವಿಚಾರವಾದಿ, ದಲಿತ ಚಿಂತಕ, ಸಾಹಿತಿ, ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಕೆ.ಮಹೇಶ್ ತಿಳಿಸಿದರು.

        ಅವರು, ಗುರುವಾರ ಇಲ್ಲಿನ ಸರ್ಕಾರ ನೌಕರರ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಸಂಘ ಮತ್ತು ಸಾಮಾಜಿಕ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಅಂಬೇಡ್ಕರ್‍ರವರ 63ನೇ ಪರಿನಿಬ್ಬಾಣ ದಿನ ಹಾಗೂ ಅಂಬೇಡ್ಕರ್‍ರವರಿಗೆ ನಮನ ಕಾರ್ಯಕ್ರಮವನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

          ಈ ಸಮಾಜದಲ್ಲಿ ಶೋಷಣೆಯಿಂದ ಮಾದಿಗ ಸಮುದಾಯವನ್ನು ಮುಕ್ತ ಮಾಡಬೇಕೆಂದು ಅಭಿಲಾಷೆ ಹೊಂದಿದ್ದ ಹಿರಿಯ ಚಿಂತಕ ಬಿ.ಆರ್.ಅಂಬೇಡ್ಕರ್ ಪ್ರತಿನಿತ್ಯ 18 ಗಂಟೆಗಳ ಕಾಲ ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಹೊಂದಿ ಸಮುದಾಯದ ಅಭ್ಯುದಯಕ್ಕೆ ತಮ್ಮ ಇಡೀ ಜೀವನವನ್ನೇ ಧಾರೆಎರೆದರು. ಆದರೆ, ಇಂದು ನಮ್ಮ ಸಮುದಾಯದಲ್ಲಿರುವ ಅನೇಕ ಹೋರಾಟಗಳು ಸಫಲತೆಯನ್ನು ಕಾಣುವಲ್ಲಿ ಸಾಧ್ಯವಾಗಿಲ್ಲ. ದಲಿತಪರ ಹೋರಾಟಗಳು ಮತ್ತಷ್ಟು ಶಕ್ತಿ ಶಾಲಿಯಾಗಿ ನಡೆಸಬೇಕಿದೆ.

          ದಲಿತ ಸಮುದಾಯಕ್ಕೆ ಅವಶ್ಯವಿರುವ ಸವಲತ್ತುಗಳನ್ನು ನೀಡುವಲ್ಲಿ ಸರ್ಕಾರದ ತಾರತಮ್ಯವನ್ನು ಎದುರಿಸುವ ಪ್ರಶ್ನಿಸುವಧೈರ್ಯವನ್ನು ನಾವು ತೋರಬೇಕಿದೆ. ಚುನಾಯಿತ ಜನಪ್ರತಿನಿಧಿಗಳು ಈ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಬೇಕಿತ್ತು. ವಿಪರ್ಯಾಸವೆಂದರೆ ಇಂದಿನ ರಾಜಕೀಯ ಶಕ್ತಿಗಳು ಒಟ್ಟಾರೆ ದಲಿತ ಸಮೂಹವನ್ನು ಕೇವಲ ಮತಬ್ಯಾಂಕ್‍ಗಳಾಗಿ ನೋಡುತ್ತಿರುವುದು ನಮ್ಮ ಹಿನ್ನಡೆಗೆ ಪ್ರಮುಖ ಕಾರಣವೆಂದರು. ಇಂದಿನ ಯುವ ಜನಾಂಗ ಅಂಬೇಡ್ಕರ್‍ರವರ ಧೇಯ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆದಲ್ಲಿ ಮಾತ್ರ ಶೋಷಣೆಯ ಬದುಕಿನಲ್ಲಿ ಬೆಳಕು ಮೂಡಲು ಸಾಧ್ಯವೆಂದರು.

        ದಲಿತ ಸಂಘಟನೆಗಳ ಹೋರಾಟಗಾರ, ನಗರಸಭಾ ಸದಸ್ಯ ಕೆ.ವೀರಭದ್ರಯ್ಯ ಮಾತನಾಡಿ, ಹೊರದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಆದರ್ಶಗಳ ಬಗ್ಗೆ ಚರ್ಚೆ ನಡೆಯುತ್ತಿವೆ. ವಿಶ್ವದ ಇತಿಹಾಸದಲ್ಲಿ ಕೇವಲ ಅಂಬೇಡ್ಕರ್‍ರವರ ಬಗ್ಗೆ ಮಾತ್ರ ಇಂದಿಗೂ ಚರ್ಚೆ ನಡೆಯುತ್ತಿದೆ. ಆದರೆ, ಈ ಸಮುದಾಯದ ಹೋರಾಟಗಾರರು ಅಂಬೇಡ್ಕರ್‍ರವರ ಆದರ್ಶಗಳ ಪಾಲಿಕೆಯಲ್ಲಿ ಪಾರದರ್ಶಕತೆಯನ್ನು ಪ್ರದರ್ಶಿಸಬೇಕಿದೆ ಎಂದರು.

        ದಲಿತ ಚಿಂತಕ ಹಾಗೂ ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ವಿಜಯಕುಮಾರ್ ಮಾತನಾಡಿ, ಇಂದು ಸಂವಿಧಾನಾತ್ಮಕವಾಗಿ ಪಡೆಯುತ್ತಿರುವ ಎಲ್ಲಾ ರೀತಿಯ ಅಧಿಕಾರಗಳು ಈ ಸಮುದಾಯಕ್ಕೆ ಬೆಳವಣಿಗೆಗೆ ಆಸರೆಯಾಗಬೇಕಿತ್ತು. ಆದರೆ ಅಧಿಕಾರಿ ಹೊಂದಿದ ಸಮುದಾಯದ ಮುಖಂಡ ಕಾರ್ಯವೈಖರಿ ಈ ಸಮುದಾಯದ ಪ್ರಗತಿಗೆ ಹಿನ್ನೆಡೆ ಉಂಟು ಮಾಡಿದೆ. ಮುಂಬರುವ ದಿನಗಳಲ್ಲಾದರೂ ಅಂಬೇಡ್ಕರ್‍ರವರ ಆದರ್ಶಗಳ ಮೂಲಕವೇ ಅಧಿಕಾರ ಪಡೆದವರು ಸಮುದಾಯದ ಏಳಿಗೆಯ ಕುರಿತು ಚಿಂತನೆ ನಡೆಸುವುದು ಅವಶ್ಯಕವೆಂದರು.

         ಯುವ ಹೋರಾಟಗಾರ ಆನಂದಕುಮಾರ್, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ, ವಕೀಲ ಓ.ಪಾಪಣ್ಣ, ಮೈತ್ರಿ ದ್ಯಾಮಣ್ಣ, ಡಿ.ಈಶ್ವರಪ್ಪ ಮುಂತಾದವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಉಮೇಶ್‍ಚಂದ್ರಬ್ಯಾನರ್ಜಿ ವಹಿಸಿದ್ದರು. ಡಿ.ವರದರಾಜು ಪ್ರಾರ್ಥಿಸಿದರು, ಡಿ.ಚಂದ್ರು ನಿರೂಪಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap