ಹಿರಿಯೂರು :
ನಗರಸಭೆಗೆ ನೂತನ ಜಿಲ್ಲಾಧಿಕಾರಿ ವಿನೋತ್ಪ್ರಿಯಾ ಭೇಟಿ ನೀಡಿ. ನಗರಸಭೆಯ ವಿವಿಧ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು, ಹುಳಿಯಾರ್ರಸ್ತೆ ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಅಗಲೀಕರಣದ ಬಗ್ಗೆ ನಗರಸಭೆ ಇಂಜಿಯರ್ರವರಿಂದ ಮಾಹಿತಿ ಪಡೆದರು, ನಗರಸಭೆಯ ನೂತನ ಕಛೇರಿ ಕಟ್ಟಡ ಕಾಮಗಾರಿ ಸ್ಥಳ ವೀಕ್ಷಣೆಮಾಡಿದರು, ಮಟನ್ ಮಾರ್ಕೆಟ್ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ವ್ಯಾಪಾರಿಗಳು ಮಾತನಾಡಿ, ಕಟ್ಟಡದಲ್ಲಿ ಯಾವುದೇ ಸೌಲಭ್ಯಗಳಿಲ್ಲ, ಈ ಕಟ್ಟಡದಲ್ಲಿ ವ್ಯಾಪಾರ ಮಾಡಲು ಕಷ್ಟಕರವಾಗುತ್ತದೆ, ಗ್ರಾಹಕರು ಇಲ್ಲಿಗೆ ಬರುವುದಿಲ್ಲ, ಅದಕ್ಕಾಗಿ ನಾವು ರಸ್ತೆಯಲ್ಲೇ ಮಾರಾಟ ಮಾಡುತ್ತಿದ್ದೇವೆಂದು ವ್ಯಾಪಾರಿಗಳು ಹೇಳಿದರು, ಅದಕ್ಕೆ ಜಿಲ್ಲಾಧಿಕಾರಿಗಳು ನಿಮಗೆ ಸೌಲಭ್ಯಗಳನ್ನು ಕಲ್ಪಿಸಲಾಗುವದು ನೀವು ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಿ, ಸ್ವಚ್ಚತೆಯನ್ನು ಕಾಪಾಡುವಂತೆ ತಿಳಿಸಿದರು.
ರಸ್ತೆಯಲ್ಲೆ ಮಟನ್ ಮಾರಾಟ ಮಾಡುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಮಾರ್ಕೆಟ್ ಒಳಭಾಗದಲ್ಲಿ ಸೌಲಭ್ಯಕಲ್ಪಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ನಗರಸಭೆ ನೂತನ ಕಛೇರಿ ಕಟ್ಟಡ ನಿರ್ಮಾಣದ ಸ್ಥಳ ವೀಕ್ಷಣೆ, ಹುಳಿಯಾರ್ ರಸ್ತೆ ಹಾಗೆ ವಿವಿಧ ಕಟ್ಟಡ ಕಾಮಗಾರಿಗಳ ವೀಕ್ಷಣೆಯನ್ನು ಜಿಲ್ಲಾಧಿಕಾರಿಗಳು ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಪೌರಾಯುಕ್ತ ಮಹಂತೇಶ್, ನಗರಸಭೆ ಇಂಜಿನಿಯರ್ ಶ್ರೀನಿವಾಸ್, ನಗರಸಭೆ ಅಧ್ಯಕ್ಷರಾದ ಮಂಜುಳಾ, ಉಪಾಧ್ಯಕ್ಷೆ ಇಮ್ರಾನಭಾನು, ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ