ದಾವಣಗೆರೆ:
ತಾಲೂಕಿನ ಆನಗೋಡು ಗ್ರಾಮದಲ್ಲಿ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ನೆರವೇರಿಸಲು ಹಾಗೂ ಸಮಾರೋಪ ಸಮಾರಂಭದ ಸಾನಿಧ್ಯವನ್ನು ಹೆಬ್ಬಾಳು ಶ್ರೀಮಹಾಂತರುದ್ರ ಸ್ವಾಮೀಜಿಯವರನ್ನು ಆಹ್ವಾನಿಸಬೇಕೆಂಬುದು ಸೇರಿದಂತೆ ವಿವಿಧ ನಿರ್ಣಯಗಳನ್ನು ಬುಧವಾರ ಆನಗೋಡಿನಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಗ್ರಾಮದ ಶ್ರೀಮರುಳ ಸಿದ್ಧೇಶ್ವರ ದೇವಸ್ಥಾನದಲ್ಲಿ ನಡೆದ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನವನ್ನು ಒಂದು ದಿನದ ಮಟ್ಟಿಗೆ ಉದ್ಘಾಟನಾ ಸಮಾರಂಭದ ಜೊತೆಗೆ ಎರಡು ಗೋಷ್ಠಿಗಳು, ಒಂದು ಕವಿಗೋಷ್ಠಿಯನ್ನು ಆಯೋಜಿಸಲು, ಸಮಾರಂಭದ ಸ್ವಾಗತ ಸಮಿತಿ ಮತ್ತು ಇತರೆ ಸಮಿತಿಗಳನ್ನು ತಾಲ್ಲೂಕು ವ್ಯಾಪ್ತಿಯ ಜನಪ್ರತಿನಿಧಿಗಳನ್ನು ಮಹಾಪೆಷಕರು ಹಾಗೂ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಮತ್ತು ಇತರೆ ಸದಸ್ಯರನ್ನು ನೇಮಕ ಮಾಡುವ ನಿರ್ಣಯವನ್ನು ಕೈಗೊಳ್ಳಲಾಯಿತು. ದಿನಾಂಕ ನಿಗಧಿಯಾದ ತಕ್ಷಣ ಸಭೆ ಕರೆದು ವಿವಿಧ ಸಮಿತಿಗಳ ರಚನೆ ಮಾಡಲು ಹಾಗೂ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ತಾಲ್ಲೂಕು ಕ.ಸಾ.ಪ. ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ತರಳಬಾಳು ಜಗದ್ಗುರು ಹಾಗೂ ಹೆಬ್ಬಾಳು ಶ್ರೀಗಳು ಅವರುಗಳನ್ನು ಎಲ್ಲರೂ ಭೇಟಿಯಾಗಿ, ಕಾರ್ಯಕ್ರಮಕ್ಕೆ ಆಹ್ವಾನಿಸೋಣ. ಹಾಗೂ ಸಮ್ಮೇಳನದ ಸಿದ್ಧತೆಗೆ ಅಗತ್ಯವಾದ ವಿವಿಧ ಸಮಿತಿಗಳನ್ನು ರಚಿಸಲು ಹಿಂದಿನ ಸಾಹಿತ್ಯ ಸಮ್ಮೇಳನಗಿಂತಲೂ ಆನಗೋಡಿನಲ್ಲಿ ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ನಡೆಸಲು ನಿಮ್ಮೆಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿದರು.
ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಆಗಬಹುದಾದ ಖರ್ಚಿನ ವಿವರಗಳನ್ನು ವಿವರಿಸಿ, ಅದರ ಕ್ರೂಢೀಕರಣಕ್ಕೆ ಹಾಗೂ ಮುಂದಿನ ಆಗುಹೋಗುಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಆನಗೋಡು ಗ್ರಾ.ಪಂ. ಅಧ್ಯಕ್ಷ ಕೆ. ರವಿ ಮಾತನಾಡಿ, ಸಾಹಿತ್ಯ ಸಮ್ಮೇಳನದ ವ್ಯವಸೆಗೆ ಪಂಚಾಯ್ತಿ ಸದಾ ಮುಂಚೂಣಿಯಲ್ಲಿದ್ದು, ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ನೇರ್ಲಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎಸ್. ಅಕ್ಕಮಹಾದೇವಿ ಮಾತನಾಡಿ, ಪ್ರತೀ ಗ್ರಾಮ ಪಂಚಾಯ್ತಿಗಳಿಗೂ ಹಲವು ಜವಾಬ್ದಾರಿಗಳನ್ನು ಹಂಚಿದರೆ, ಸಮ್ಮೇಳನ ಇನ್ನು ಅರ್ಥಪೂರ್ಣವಾಗಿ ನಡೆಸಲು ಸಹಾಯವಾಗಬಹುದು ಎಂದರು.
ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಎನ್.ಎಸ್.ರಾಜು, ತಾಲ್ಲೂಕು ಗೌರವ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ, ಕೋಶಾಧ್ಯಕ್ಷ ಹೆಚ್.ಕೆ. ಪಾಲಾಕ್ಷಪ್ಪ, ನಿರ್ದೇಶಕರುಗಳಾದ ಹೆಚ್.ಎಸ್. ಮುರುಗೇಂದ್ರಪ್ಪ, ಎಂ.ಸಿ.ಪಾಟೀಲ್, ಬಿ.ಎಂ.ಮುರುಗಯ್ಯ ಕುರ್ಕಿ, ರಾಜಶೇಖರ್ ಸಂಡೂರು, ಕೆ. ರಾಘವೇಂದ್ರ ನಾಯರಿ, ಹಿರಿಯ ಸಾಹಿತಿ ಶಾಂತಗಂಗಾಧರ್, ಸಿ.ಜಿ. ಜಗದೀಶ್ ಕೂಲಂಬಿ, ವಿವಿಧ ಗ್ರಾಮಗಳ ಮುಖಂಡರುಗಳಾದ ಹೆಚ್.ಜಿ. ಬಸವರಾಜಪ್ಪ, ಎ.ಕೆ. ನಾಗಪ್ಪ, ಆವರಗೆರೆ ರುದ್ರಮುನಿ, , ವಿಠೋಬರಾಯ್, ಬಿ.ಓ. ಜಂಬುನಾಥ್, ಕೆ.ಶಿವಕುಮಾರ್, ಎನ್.ಜಿ.ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ಜಿ. ಜೀವನಪ್ರಕಾಶ್, ಹೆಚ್. ಮಲ್ಲಿಕಾರ್ಜುನಪ್ಪ, ಹೆಚ್. ಈಶ್ವರಪ್ಪ, ಸಿ.ಹೆಚ್. ಉಮೇಶ್, ಎಸ್.ಎಂ. ರೇವಣಸಿದ್ಧಪ್ಪ, ಕೆ.ಎಸ್. ಶಿವಶಂಕರ್,ಟಿ.ಜಿ. ಶಿವಶಂಕರ್, ಹೆಚ್. ಶಾಂತಕುಮಾರ್, ಪ್ರಕಾಶ್ ಹೆಚ್.ಎನ್., ಪತ್ರಕರ್ತ ಜಿ. ಜಗದೀಶ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ