ದಲಿತರ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪಲಿ : ಪೂವಿತ.ಎಸ್

ತಿಪಟೂರು :

         ದಲಿತರ ಮೇಲೆ ದೌರ್ಜನ್ಯವಾದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟವರ್ಗದ ಜನರಿಗಾರಿ ಸರ್ಕಾರ ಹಲವಾರು ಯೋಜನೆ ರೂಪಿಸಿವೆ. ಅವುಗಳು ನಿಜವಾದ ಫಲಾನುಭವಿಗಳಿಗೆ ದೊರಕಲು ಕ್ರಮವಹಿಸಬೇಕು ಎಂದು ತಿಪಟೂರು ಉಪವಿಭಾಗಾಧಿಕಾರಿ ಕುಮಾರಿ ಎಸ್.ಪೂವಿತ ತಿಳಿಸಿದರು.

        ನಗರದ ಕಲ್ಪತರು ಸಭಾಂಗಣದಲ್ಲಿ ಆಯೋಜಿಸಿದ್ದ ತಿಪಟೂರು ಉಪವಿಭಾಗ ಮಟ್ಟದ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಮ್ಮ ವ್ಯಾಪ್ತಿಯಲ್ಲಿ ಪೆಂಡಿಂಗ್ ಇರುವ ಪಿ.ಟಿ.ಸಿ.ಎಲ್ ಪ್ರಕರಣಗಳನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ರಾಜ್ಯ ಸರ್ಕಾರ ಬಗರ್ ಹುಕ್ಕುಂ ಸಾಗುವಳಿ ಅರ್ಜಿಗೆ ಸಲ್ಲಿಸಲು ಅವಕಾಶ ಕಲ್ಪಿಸಿದೆ ಆದರೆ ಉಳ್ಳವರೆ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿಸಲ್ಲಿದ್ದಾರೆ ಎಂದು ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಸರ್ಕಾರ ನಿಯಮಪಾಲನೆ ಅರ್ಹ ಫಲಾನುಭವಿಗಳಿಗೆ ಮಾತ್ರ ಭೂಮಿ ಮುಂಜೂರು ಮಾಡಲಾಗುವುದು ಎಂದರು.

         ಗ್ರಾಮೀಣ ಪ್ರದೇಶದಲ್ಲಿ ದಲಿತರಿಗೆ ಶವ ಸಂಸ್ಕಾರಕ್ಕೆ ಸ್ಮಶಾನ ವ್ಯವಸ್ಥೆ ಇಲ್ಲವಾಗಿದೆ ಎಂದರು. ಸರ್ಕಾರಿ ದಾಖಲೆಯಲ್ಲಿ ಸ್ಮಶಾನವಿರುದು, ಖಾಸಗೀ ವ್ಯಕ್ತಿಗಳು, ಅತಿಕ್ರಮಿಸಿದ್ದಾರೆ ಆದರೆ ಈ ಬಗ್ಗೆ ದೂರು ನೀಡಿದರು ಕ್ರಮವಹಿಸುತ್ತಿಲ್ಲ ಈ ಬಗ್ಗೆ ಉಪವಿಭಾಗಾಧಿಕಾರಿಗಳು ಖುದ್ದು ಸ್ಥಳ ಪರಿಶೀಲಿಸಿ ಕ್ರಮವಹಿಸಬೇಕು, ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಜನರಿಗೆ ಸರಿಯಾಗಿ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದು ಈ ಬಗ್ಗೆ ಕ್ರಮವಹಿಸಬೇಕು. ಮುಖ್ಯವಾಗಿ ಪರಿಶಿಷ್ಠ ಜಾತಿ ವರ್ಗದ ಫಲಾನುಭವಿಗಳಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಾದ ಎಸ್.ಸಿ.ಪಿ, ಟಿ.ಎಸ್.ಪಿ ಮುದ್ರಾ ಯೋಜನೆಗಳಲ್ಲಿ ಫಲಾನುಭವಿಗಳು ಆಯ್ಕೆಯಾದರೆ ಬ್ಯಾಂಕುಗಳು ಸಾಲ ಸೌಲಭ್ಯ ನೀಡದೆ ದಲಿತ ವಿರೋದಿ ದೋರಣೆಯನ್ನು ಅನುಸರಿಸುತ್ತಿದ್ದು, ದಲಿತ ವಿರೋಧಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

        ಸಭೆಯಲ್ಲಿ ತಿಪಟೂರು ತಹಸೀಲ್ದಾರ್ ಡಾ. ವಿ.ಮಂಜುನಾಥ್, ಸಮಾಜ ಕಲ್ಯಾಣಾಧಿಕಾರಿ ದಿನೇಶ್, ತುರುವೇಕೆರೆ ತಹಸೀಲ್ದಾರ್ ನಾಗರಾಜು, ಸಮಾಜದ ಮುಖಂಡರಾದ ಈಚನೂರು ಮಹದೇವ್, ರಂಗಸ್ವಾಮಿ, ಕಲ್ಲೇಶ್, ನರಸಿಂಹಮೂರ್ತಿ, ಮಹಲಿಂಗಯ್ಯ, ಬಸವರಾಜು, ವಿ.ಟಿ.ವೆಂಕಟರಾಮ್ ಮುಂತಾದ ಮುಖಂಡರುಗಳಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link