ಸೀಮೆಹಸುಗಳ ಕಳುವು ವಿಫಲ ಯತ್ನ

ಮಿಡಿಗೇಶಿ

        ಮಧುಗಿರಿಯಿಂದ ಪಾವಗಡಕ್ಕೆ ಹಾದು ಹೋಗುವ ಕೆ.ಶಿಫ್.ರಾಜ್ಯಹೆದ್ದಾರಿ ರಸ್ತೆ ಚಿನ್ನೇನಹಳ್ಳಿ ಗ್ರಾಮದ ಶ್ರೀ ಶನೈಶ್ವರಸ್ವಾಮಿ ದೇವಸ್ಥಾನದ ಪಕ್ಕದ ಲಕ್ಷ್ಮಮ್ಮ ಕೋಂ ಟೈಲರ್ ರಮೇಶ್ ರವರಿಗೆ ಸೇರಿದ ಎರಡು ಸೀಮೆ ಹಸುಗಳನ್ನು ಕದ್ದುಕೊಂಡು ಹೋಗಲು ಬಂದಿದ್ದ ಕಳ್ಳರಿಗೆ ಕೈಗೆ ಸಿಗದೆ ಬಂದ ತುತ್ತು ಬಾಯಿಗೆ ಬಾರದಂತಾಗಿರುತ್ತದೆ.

        ತಾ28-12-2018ರಂದು ರಾತ್ರಿ ಸಮಯ ಸುಮಾರು 11-30 ಗಂಟೆಯ ವೇಳೆಗಾಗಲೇ ಮನೆಯ ಮುಂದೆ ಚಪ್ಪರದಡಿಯಲ್ಲಿ ಕಟ್ಟಿಹಾಕಿದ್ದಂತಹ ಎರಡು ಸೀಮೆಹಸು,ಒಂದು ಪಡ್ಡೆಕರುವನ್ನು ಎಂದಿನಂತೆ ಚಪ್ಪರದಡಿಯಲ್ಲಿ ಕಟ್ಟಿಹಾಕಿದ್ದು ಸರಿಯಷ್ಠೇ ಸದರಿ ಸೀಮೆಯ ಎರಡು ಹಸುಗಳನ್ನು ಕದ್ದು ಕತ್ತಿರಾಜನಹಳ್ಳಿಯ ದಾರಿಯ ಮಾರ್ಗವಾಗಿ ಸಾಗಿಸಲು ದಾರಿಯ ಪಕ್ಕದ ಜಮೀನಿನಲ್ಲಿ ಒಂದೊಂದು ಕಡೆ ಒಂದೊಂದನ್ನು ಕಟ್ಟಿಹಾಕಿ ಹಸುಗಳನ್ನು ಸಾಗಿಸಿಕೊಂಡು ಹೋಗಲು ಬುಲೇರೊ ವಾಹನ ಅಥವಾ ಟಾಟಾಏಸ್ ,ವಾಹನದಲ್ಲಿ ತುಂಬಿಕೊಂಡು ಸಾಗಿಸಿಕೊಂಡು ಹೋಗುವ ಸಮಯದಷ್ಠತ್ತಿಗೆ ಹಸುಗಳ ಮಾಲೀಕ ಆಕಸ್ಮಿಕವಾಗಿ ಮನೆಯಿಂದ ಹೊರಬಂದಾಗ ಹಸುಗಳು ಕಾಣದಿದ್ದಾಗ ಗಾಬರಿಗೊಂಡು ಗ್ರಾಮದ ಹಲವಾರು ಸುಮಾರು(30ದ್ವಿಚಕ್ರ ವಾಹನಗಳಲ್ಲಿ) ಹಸುಗಳನ್ನು ಹುಡುಕಲಾರಂಭಿಸಿದ್ದು

         ಹಸುಗಳನ್ನು ಕತ್ತಿರಾಜನಹಳ್ಳಿ ರಸ್ತೆ ಬದಿಯ ಜಮೀನಿನಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾರೆ,ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಹಸುಗಳು ಪತ್ತೆಯಾಗಿರುತ್ತವೆ,ಇದೇ ಸಮಯದಲ್ಲಿ ಹೊಸಕೆರೆಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಮಿಡಿಗೇಶಿಯ ಇಬ್ಬರು ರಕ್ಷಣಾ ಸಿಬ್ಬಂಧಿಯವರು ಸ್ಥಳಕ್ಕೆ ಭೇಟಿ ನೀಡಿ ಹಸುಗಳನ್ನು ಕದಿಯಲು ಬಂದಿದ್ದ ಕಳ್ಳರ ಪತ್ತಗೆ ಪ್ರಯತ್ನ ಪಟ್ಟಿರುತ್ತಾರಾದರೂ ಪ್ರಯೋಜನವಾಗಿರುವುದಿಲ್ಲ ಮಿಡಿಗೇಶಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನೇ,ದಿನೇ,ಹಸುಗಳ ಕಳುವು ಪ್ರಕರಣಗಳು ಹೆಚ್ಚುತ್ತಿದ್ದು ರಕ್ಷಣಾ ಇಲಾಖೆಯ ರಾತ್ರಿ ಪಹರೆ ಹೆಚ್ಚಿಸುವಂತೆ ಹಾಗೂ ಅತಿ ಶೀರ್ಘವಾಗಿ ಹಸುಗಳನ್ನು ಕದಿಯುತ್ತಿರುವ ಕಳ್ಳರ ಗ್ಯಾಂಗ್‍ನವರನ್ನು ಬಂಧಿಸುವ ಮೂಲಕ ಕಳುವು ಪ್ರಕರಣಗಳಿಗೆ ನಿಯಂತ್ರಣ ಹಾಕುವಂತೆ ಈ ಭಾಗದ ಪ್ರಜ್ಞಾವಂತ ನಾಗರೀಕರ ಮನವಿಯಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link