ಬುದ್ಧಿಮಾಂಧ್ಯ ಮಕ್ಕಳಿಗೆ ಸಿಹಿ ವಿತರಣೆ

ಚಿತ್ರದುರ್ಗ:

       ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆ ಹಾಗೂ ಮೈಸೂರು ಹುಲಿ ಟಿಪ್ಪುಸುಲ್ತಾನ್‍ರವರ 237 ನೇ ಪಟ್ಟಾಭಿಷೇಕದ ಅಂಗವಾಗಿ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿರವರು ರಾಷ್ಟ್ರನಾಯಕ ದಿವಂಗತ ಎಸ್.ನಿಜಲಿಂಗಪ್ಪನವರ ನಿವಾಸದ ರಸ್ತೆಯಲ್ಲಿರುವ ಡೇಕೇರ್ ಸೆಂಟರ್‍ನಲ್ಲಿರುವ ಬುದ್ದಿಮಾಂಧ್ಯ ಮಕ್ಕಳಿಗೆ ಶನಿವಾರ ಸಿಹಿ ವಿತರಿಸಿದರು.

         ಬುದ್ದಿಮಾಂಧ್ಯ ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದ ಟಿಪ್ಪುಖಾಸಿಂಆಲಿ ಕೆಲವು ಮತಾಂಧರು ಟಿಪ್ಪುಸುಲ್ತಾನ್ ಕನ್ನಡ ವಿರೋಧಿ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಟಿಪ್ಪು ಕನ್ನಡ ವಿರೋಧಿಯಾಗಿದ್ದರೆ ಶ್ರೀರಂಗಪಟ್ಟಣದಲ್ಲಿ ದೇವಸ್ಥಾನ ಕಟ್ಟಿಸುತ್ತಿರಲಿಲ್ಲ. ಶೃಂಗೇರಿ ಶಾರದಾಂಭೆಯ ಪರಮ ಭಕ್ತನಾಗಿಯೂ ಇರುತ್ತಿರಲಿಲ್ಲ ಎಂದು ವಿರೋಧಿಗಳ ಟೀಕೆಗೆ ತಿರುಗೇಟು ನೀಡಿದರು.

          ರಸಋಷಿ ಕುವೆಂಪುರವರು ಕನ್ನಡವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಕುವೆಂಪುರವರ ಬದುಕು ಮತ್ತು ಸಿದ್ದಾಂತಗಳನ್ನು ಚಿಕ್ಕಂದಿನಿಂದಲೆ ಶಾಲಾ ಮಕ್ಕಳಿಗೆ ತಿಳಿಸಬೇಕು ಎಂದರು.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್ ಮಾತನಾಡಿ ಟಿಪ್ಪು ಕನ್ನಡ ಪ್ರೇಮಿಯಾಗಿದ್ದರು. ಬ್ರಿಟೀಷರ ವಿರುದ್ದ ದೇಶದ ಸ್ವಾತಂತ್ರಕ್ಕಾಗಿ ಹೋರಾಡಬೇಕಾದರೆ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಗಿಟ್ಟು ದೇಶಪ್ರೇಮ ಸಾರಿದ ಟಿಪ್ಪು ಎಂದಿಗೂ ಹಿಂದುಗಳ ವಿರೋಧಿಯಾಗಿರಲಿಲ್ಲ ಎನ್ನುವುದನ್ನು ಮೊದಲು ಟಿಪ್ಪುವಿರೋಧಿಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

         ರಾಷ್ಟ್ರಕವಿ ಕುವೆಂಪುರವರು ಪುರಾತನ ಮೈಸೂರು ವಿ.ವಿ.ಉಪಕುಲಪತಿಯಾಗಿ ಕೆಲಸ ಮಾಡಿ ಕನ್ನಡದ ಪ್ರೌಢಿಮೆಯನ್ನು ಹೆಚ್ಚಿಸಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಕನ್ನಡಾಭಿಮಾನವಿದ್ದಾಗ ಮಾತ್ರ ಕುವೆಂಪುರವರ ಜನ್ಮದಿನಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ತಿಳಿಸಿದರು.ಮಾಳಪ್ಪನಹಟ್ಟಿ ಸಮೀಪವಿರುವ ತೀಕ್ಷ್ಮ ಅಂಧರ ಶಾಲೆಯ ಮಕ್ಕಳಿಗೂ ಸಿಹಿ ವಿತರಿಸಲಾಯಿತು.ಡೇಕೇರ್ ಸೆಂಟರ್‍ನ ಕಾರ್ಯದರ್ಶಿ ಸತ್ಯನಾರಾಯಣ್, ರೇಣುಕ, ನ್ಯಾಯವಾದಿಗಳಾದ ವೀರಣ್ಣ, ಹೆಚ್.ಶಬ್ಬೀರ್‍ಭಾಷ, ಮೆಹಬೂಬ್‍ಸಾಬ್ ಈ ಸಂದರ್ಭದಲ್ಲಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap