ತೋವಿಕೆರೆ
ತುಮಕೂರು ಹಾಗೂ ಕೊರಟಗೆರೆಗೆ ತೋವಿನಕೆರೆಯನ್ನು ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತುಂಬಿದ ಚೀಲಗಳನ್ನು ಲಾರಿಯಲ್ಲಿ ತಂದು ಬುಧವಾರ ಬೆಳಗ್ಗೆ 9 ಗಂಟೆಯಲ್ಲಿ ತಮಗೆ ತೋಚಿದ ಕಡೆ ಹಾಕಿಕೊಂಡು ಹೋಗಿದ್ದಾರೆ. ಗ್ರಾಮದ ಬಸ್ ನಿಲ್ದಾಣದಲ್ಲಿ ಮೂರು ಚೀಲಗಳನ್ನು, ಜೋನಿಗರಹಳ್ಳಿ ತೋವಿನಕೆರೆ ರಸ್ತೆಯಲ್ಲಿ ಐದು ಚೀಲಗಳನ್ನು ಸಹ ಹಾಕಿರುತ್ತಾರೆ. ಚೀಲಗಳನ್ನು ಪರಿಶೀಲಿಸಿದಾಗ ಪ್ಲಾಸ್ಟಿಕ್ ತ್ಯಾಜ್ಯ ಹೊಂದಿರುವುದು ಕಂಡು ಬಂದಿದೆ.
ತೋವಿನಕೆರೆಯಲ್ಲಿ ಖಾಸಗಿಯವರು ತಮ್ಮ ಅಂಗಡಿಗಳ ಮುಂದೆ ಹಾಗೂ ಪೆÇಲೀಸ್ ಇಲಾಖೆ ಬಸ್ ನಿಲ್ದಾಣದ ವೃತ್ತದಲ್ಲಿ ಸಿ.ಸಿ.ಟಿ.ವಿ.ಗಳನ್ನು ಅಳವಡಿಸಿದ್ದು, ಅದನ್ನು ಪರಿಶೀಲಿಸಿ ಲಾರಿಯ ಗುರ್ತು ಪತ್ತೆ ಮಾಡಿ ಕಾನೂನು ಕ್ರಮ ತೆಗೆದು ಕೊಳ್ಳ ಬೇಕು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಹಿಂದೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ತ್ಯಾಜ್ಯವನ್ನು ಕುರಂಕೋಟೆ ರಸ್ತೆಯಲ್ಲಿ ಸುರಿದು ಹೋಗಿದ್ದರು. ಈ ರೀತಿ ತ್ಯಾಜ್ಯವನ್ನು ತಂದು ಹಾಕುತ್ತಿರುವುದು ನಾಲ್ಕನೇ ಸಲವಾಗಿದೆ.