ಟಿವಿ ಚಾನಲ್ ಗೆ ಬೆದರಿಕೆ ಹಾಕಿದ ಭೂಗತ ದೊರೆ…!!

ಕೊಚ್ಚಿ: 
         ಮಾಲಿವುಡ್ ನ ಪ್ರಸಿದ್ಧ ನಟಿ ಲೀನಾ ಮಾರಿಯಾ ಪೌಲ್ ಒಡೆತನದ ಬ್ಯೂಟಿ ಪಾರ್ಲರ್ ಮೇಲೆ ನಡೆದಿದ್ದ  ಗುಂಡಿನ ದಾಳಿಗೆ ಸಂಬಂಧಿಸಿದಂತೆ ಟಿವಿ ಚಾನೆಲ್ ವೊಂದಕ್ಕೆ ಕುಖ್ಯಾತ ಭೂಗತ  ದೊರೆ ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದರೆಂದು ತಿಳಿದುಬಂದಿದೆ. 
        ಟಿವಿ ಚಾನೆಲ್ ಬಂದಿದ್ದ ಕರೆಯಲ್ಲಿ ರವಿ ಪೂಜಾರಿ ತಾನು ಆಸ್ಟ್ರೇಲಿಯಾದಿಂದ ಕರೆ ಮಾಡಿ ಆ ಶೂಟೌಟ್ ತಾನೆ ಮಾಡಿಸಿದ್ದು ನಾನು ನನ್ನ ಕೆಲಸ ಮಾಡಿಯಾಗಿದೆ ಪೊಲೀಸರು ಅವರ ಕೆಲಸ ಮಾಡುತ್ತಿದ್ದು ನೀವು ನಿಮ್ಮ ಮಿತಿಯಲ್ಲಿ ಇರುವುದು ಉತ್ತಮ ಎಂದು ಬೆದರಿಕೆ ಕರೆ ಮಾಡಿದ್ದಾನೆ ಎಂದು ಚಾನಲ್ ಸುದ್ದಿ ಪ್ರಸಾರ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ .ಶೂಟೌಟ್ ಮಾಡಿದ ವ್ಯಕ್ತಿಗಳು ಆ ಜಾಗದಲ್ಲಿ ರವಿ ಪುಜಾರಿಯಿಂದ ಪಡೆದಿರುವ ಪತ್ರವೊಂದನ್ನು ಘಟನಾ ಸ್ಥಳದಲ್ಲಿ ಎಸೆದು ಹೋಗಿದ್ದಾರೆ ಎಂದು ತಿಳಿದು ಬಂದಿದೆ.          
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ