ಟೀಂ ಮೋದಿ ಕ್ಯಾಲೆಂಡರ್ ಬಿಡುಗಡೆ

ದಾವಣಗೆರೆ:
   
        ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿ ಸೋಮವಾರ ಟೀಂ ಮೋದಿ ವತಿಯಿಂದ ಹೊರ ತಂದಿರುವ ಹೊಸವರ್ಷದ ವಿಶೇಷ ಕ್ಯಾಲೆಂಡರ್ ಅನ್ನು ಆವರಗೊಳ್ಳು ಪರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು.
        ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ದೇಶದ ರಕ್ಷಣೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಉತ್ತಮ ನಾಯಕತ್ವ ಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಸರ್ವತೋಮುಖ ಅಭಿವೃದ್ಧಿ ಕನಸು ಕಂಡಿದ್ದಾರೆ. ಆದ್ದರಿಂದ ಮತ್ತೊಂದು ಅವಧಿಗೆ ನರೇಂದ್ರ ಮೋದಿಯವರ ನಾಯಕತ್ವ ದೇಶಕ್ಕೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರರ ಯೋಜನೆಗಳನ್ನು ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಟೀಂ ಮೋದಿ ವತಿಯಿಂದ ಕ್ಯಾಲೆಂಡ್ ಬಿಡುಗಡೆಗೊಳಿಸಿರುವುದು ಸಂತಸದ ಸಂಗತಿ ಎಂದು ಶ್ಲಾಘಿಸಿದರು.
       ಆರ್ ಎಸ್‍ಎಸ್ ಮುಖಂಡ ಕೆ.ಬಿ.ಶಂಕರನಾರಾಯಣ ಮಾತನಾಡಿ, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ಅನೇಕ ಜನಪರ ಯೋಜನೆಗಳು ಜಾರಿಗೆ ಬಂದಿವೆ. ಮೋದಿ ಆಡಳಿತದಲ್ಲಿ ದೇಶದ ಸಮಗ್ರ ಚಿತ್ರಣವೇ ಬದಲಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಘನತೆ, ಗೌರವ ಹೆಚ್ಚಾಗಿದೆ ಎಂದು ಹೇಳಿದರು.
 
       ಪ್ರಧಾನಿ ಮೋದಿಯವರು ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತ ನೀಡಿದ್ದಾರೆ. ಇನ್ನೊಂದು ಅವಧಿಗೆ ಮೋದಿ ಪ್ರಧಾನಿಯಾದರೆ, ಭಾರತವು ಇಡೀ ಪ್ರಪಂಚದ ಅಗ್ರಗಣ್ಯ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ 2019ರ ಲೋಕಸಭಾ ಚುನಾವಣೆಯು ದೇಶದ ಜನತೆಗೆ ಸತ್ವ ಪರೀಕ್ಷೆಯಾಗಿದೆ ಎಂದರು.
       ಟೀಂ ಮೋದಿ ಸಂಚಾಲಕಿ ಶಾರದಾ ಮಾತನಾಡಿ, ಮತ್ತೆ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಡಿ.16ರಂದು ರಾಜ್ಯದ ಸುಮಾರು 343 ಕಡೆಗಳಲ್ಲಿ ಟೀಂ ಮೋದಿ ಉದ್ಘಾಟನೆಗೊಂಡಿದೆ. ಮೋದಿ ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಹೊಸವರ್ಷಕ್ಕೆ ಕ್ಯಾಲೆಂಡರ್ ಹೊರತರಲಾಗಿದೆ. ಕ್ಯಾಲೆಂಡರ್‍ನಲ್ಲಿ ನರೇಂದ್ರ ಮೋದಿಯವರ ಸಾಧನೆಗಳಿಗೆ ಸಂಬಂಧಿಸಿದ ವಿಶೇಷ ದಿನಗಳನ್ನು ನಮೂದಿಸಲಾಗಿದೆ. ಕ್ಯಾಲೆಂಡರ್‍ಗಾಗಿ ದೂ:96635 08213 ಮೂಲಕ ಟೀಂ ಮೋದಿ ತಂಡವನ್ನು ಸಂಪರ್ಕಿಸಬೇಕೆಂದು ಕೋರಿದರು.
     
        ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಕಾರ್ಯದರ್ಶಿ ಎಸ್.ಟಿ.ವೀರೇಶ, ಭಾರತ ವಿಕಾಸ ಪರಿಷತ್ ಅಧ್ಯಕ್ಷ ಜಯರುದ್ರೇಶ, ಎಸ್.ಟಿ.ವಿಜೇಂದ್ರ, ಡಾ.ಶಾಂತಾ ಭಟ್, ನಿವೃತ್ತ ಯೋಧ ಎಂ.ಬಸಪ್ಪ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link