ಬೆಂಗಳೂರು
ಮಲ್ಲೇಶ್ವರ, ಸುಬ್ರಮಣ್ಯ ನಗರ, ಸಂಜಯ್ ನಗರ,ಕೆಆರ್‍ಪುರಂ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಬೈಕ್ ಹಾಗೂ ಚಿನ್ನಾಭರಣ ಕಳೆದುಕೊಂಡಿದ್ದ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಹೊಸ ವರ್ಷ ಆಚರಿಸಿದರು.
ಚಿನ್ನಾಭರಣ ಕಳೆದುಕೊಂಡವರಿಗೆ ಹಿಂತಿರುಗಿಸಿ ಪೊಲೀಸರು ಅಚ್ಚರಿ ನೀಡಿದ್ದು ಕಳೆದುಕೊಂಡು ವಸ್ತುಗಳನ್ನು ಪಡೆದವರು ಅಚ್ಚರಿ ಜೊತೆಗೆ ಸಂತಸಪಟ್ಟಿದ್ದಾರೆ. ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಖದೀಮರು ಕೈಚಳ ತೋರಿಸಿ ಹಣ, ಬೈಕ್ ಹಾಗೂ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದರು. ಅಂತೆಯೇ ಈ ಬಗ್ಗೆ ದೂರು ದಾಖಲಾಗಿದ್ದವು.
ಆದರೆ ಬೈಕ್ ಹಾಗೂ ಚಿನ್ನಾಭರಣ ಕಳೆದುಕೊಂಡ ಮಾಲೀಕರ ಮನೆಗೆ ಖುದ್ದು ಪೊಲೀಸರೇ ಹೋಗಿ ಅವರ ಬೈಕ್ ಹಾಗೂ ಚಿನ್ನಾಭರಣ ವಿತರಿಸಿ ಹೊಸ ವರ್ಷದ ಉಡುಗೊರೆ ನೀಡಿದ್ದಾರೆ.
ಪೊಲೀಸರ ಅನಿರೀಕ್ಷಿತ ಆಗಮನ ವಸ್ತು ಕಳೆದುಕೊಂಡ ಮಾಲೀಕರಿಗೆ ಆರಂಭದಲ್ಲಿ ಭಯವಾಗಿತ್ತು. ನಂತರ ವಿಷಯ ತಿಳಿದು ಖುಷಿಯಾದರು. ಕಳೆದು ಹೋದ ವಸ್ತುಗಳನ್ನು ಹೊಸ ವರ್ಷದ ಉಡುಗೊರೆ ರೂಪದಲ್ಲಿ ನೀಡಿರುವುದನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆಚ್ಚರಿ ಜೊತೆಗೆ ಸಂತೋಷ ವ್ಯಕ್ತಪಡಿಸುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








