ಬೆಂಗಳೂರು
ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಭಾನುವಾರ ಮಧ್ಯರಾತ್ರಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಮೈಕೋ ಲೇಔಟ್ ಹಾಗೂ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಲ್ಲಾಳ ಉಪನಗರದ ಮಂಗನಹಳ್ಳಿ ಸರ್ಕಲ್ ಬಳಿ ರಸ್ತೆ ಉಬ್ಬು (ಹಂಪ್) ಎಗರಿ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಬಿಬಿಎಂ ವಿದ್ಯಾರ್ಥಿ ರಂಜನ್ (20) ಮೃತಪಟ್ಟರೆ, ಆತನ ಸ್ನೇಹಿತ ಮೋಹನ್ (17) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಲೆಗೆ ಗಾಯಗೊಂಡಿರುವ ಮೋಹನ್ ಸ್ಥಿತಿ ಚಿಂತಾಜನಕವಾಗಿದೆ. ರಾತ್ರಿ 1.30ರ ವೇಳೆ ಉಲ್ಲಾಳ ಉಪನಗರದ ಈ ಇಬ್ಬರೂ ಸ್ನೇಹಿತರು ಬೈಕ್ನಲ್ಲಿ ಮಂಗನಹಳ್ಳಿ ಸರ್ಕಲ್ ಬಳಿ ವೇಗವಾಗಿ ಹೋಗುತ್ತಿದ್ದಾಗ ಹಂಪ್ ಎಗರಿ ಮೊದಲು ರಸ್ತೆ ವಿಭಜಕ ನಂತರ, ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.ಕಾಮಾಕ್ಷಿಪಾಳ್ಯ ಸಂಚಾರಿ ಪೆÇಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಮೈಕೋ ಲೇಔಟ್ನ ವಿಜಯಾ ಬ್ಯಾಂಕ್ ಕಾಲೋನಿ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಸೋಮ್ ಸಂದೀಪ್ (25) ಎಂಬ ಬಿಳೇಕಹಳ್ಳಿಯ ಇಂಜಿನಿಯರಿಂಗ್ ವಿದ್ಯಾರ್ಥಿ ಆಯತಪ್ಪಿ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.
ಮಧ್ಯರಾತ್ರಿ 3.15ರ ವೇಳೆ ಹೊಸವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ಸಂದೀಪ್ ಮನೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದ್ದು, ಮೈಕೋ ಲೇಔಟ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








