ಹರಪನಹಳ್ಳಿ:
ಆಕಸ್ಮಿಕ ಬೆಂಕಿಯಿಂದ ಎರಡು ಮನೆಗಳು ಸಂಪೂರ್ಣ ಸುಟ್ಟು ಹೋದ ಘಟನೆ ತಾಲೂಕಿನ ಹಿರೆಮೇಗಳಗೇರೆ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಜರುಗಿದೆ.
ಗ್ರಾಮದ ಪೂಜಾರ್ ದುರುಗಪ್ಪ ಹಾಗೂ ಪೂಜಾರ್ ಅಂಜೀನಪ್ಪನವರ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಬೆಳಿಗ್ಗೆ ಯಥಾರೀತಿ ಅಡುಗೆ ಕಾರ್ಯಕ್ಕಾಗಿ ಒಲೆ ಒತ್ತಿಸಿ ಯಾವುದೋ ಸಾಮಗ್ರಿಗಾಗಿ ಹೊರಬಂದ ಸಮಯದಲ್ಲಿ ಒಲೆಯೊಳಗಿನ ಬೆಂಕಿ ಕಿಡಿ ಸಿಡಿದು ಮನೆಗೆ ಆವರಿಸಿಕೊಂಡಿದ್ದು ಇಡೀ ಮನೆ ಸುಟ್ಟು ಪಕ್ಕದ ಮನೆಯೂ ಸೇರಿ ಎರಡೂ ಮನೆಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.
ಗ್ರಾಮಸ್ಥರು ಬೆಂಕಿ ಹೆಚ್ಚಾಗಿ ಇತರೆ ಮನೆಗಳಿಗೆ ಆವರಿಸುವ ಮುನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕಸ್ಮಿಕ ಬೆಂಕಿಯಿಂದ ಮನೆಯ ಎಲ್ಲಾ ವಸ್ತುಗಳು ಸುಟ್ಟು ಹೋಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








