ವಿಕಲಚೇತನ ವಿದ್ಯಾರ್ಥಿಗಳೊಂದಿಗೆ ಹೊಸ ವರ್ಷ ಆಚರಿಸಿದ ಉಪ ನೋಂದಣಿ ಅಧಿಕಾರಿ

ಹರಿಹರ ;

         ನಗರದ ಹೊರವಲಯದಲ್ಲಿರುವ ಆಂಜನೇಯ ಬಡಾವಣೆಯಲ್ಲಿರುವ ಶ್ರೀ ಹರಿಹರೇಶ್ವರ ಅಂಗವಿಕಲರ ವಸತಿಯುತ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿಕಲಚೇತನ ಹಾಗೂ ಬುದ್ಧಿಮಾಂದ್ಯ ವಿದ್ಯಾರ್ಥಿಗಳೊಂದಿಗೆ ಉಪನೋಂದಣಿ ಅಧಿಕಾರಿ ಶ್ರೀಮತಿ,ಆರ್.ಎಲ್.ವೀಣಾರವರು ಹೊಸ ವರ್ಷವನ್ನು ಆಚರಿಸಿದರು.

       ಸಾಮಾನ್ಯವಾಗಿ ಎಂದು ಹೊಸವರ್ಷವನ್ನು ಅದ್ಧೂರಿಯಾಗಿ ಪಾರ್ಟಿ ಹಾಗೂ ಇತರೆ ಚಟುವಟಿಕೆಗಳೊಂದಿಗೆ ಆಚರಿಸಲು ಆಚರಿಸುವ ಜನರೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ವಿಕಲಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸರಳವಾಗಿ ಹೊಸ ವರ್ಷವನ್ನು ಆಚರಿಸಿಕೊಂಡು ಹರಿಹರದ ಉಪ ನೋಂದಣಿ ಅಧಿಕಾರಿ ಶ್ರೀಮತಿ ವೀಣಾರವರು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದರು.

      ಇಂದು ಶಾಲೆಗೆ ತಮ್ಮ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿದ ಶ್ರೀಮತಿ ವೀಣಾ ಅವರು ಅಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಹಬ್ಬದ ಅಡುಗೆ ಹೋಳಿಗೆ ಕೇಸರಿ ಬಾತ್ ಬಿಸಿಬೇಳೆ ಬಾತ್ ಅನ್ನ ಸಾಂಬಾರ್ ಮಜ್ಜಿಗೆ ಇತರ ಪಕ್ಷಗಳೊಂದಿಗೆ ವಿದ್ಯಾರ್ಥಿಗಳೊಂದಿಗೆ ತಾವು ಊಟದ ರುಚಿಯನ್ನು ಸವಿದರು.ಹಾಗೂ ಶಾಲೆಯಲ್ಲಿರುವ ಎಲ್ಲಾ 64 ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಸಹ ವಿತರಿಸಿ,ವಿದ್ಯಾರ್ಥಿಗಳು ಹಾಗೂ ಶಾಲೆಯ ಸಿಬ್ಬಂದಿಗಳ ಮೆಚ್ಚುಗೆ ಗಳಿಸಿದರು.

       ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ನಾವೇ ಸಹಾಯ ಮಾಡಿ ಕಾರ್ಯಕ್ರಮಗಳಲ್ಲಿ ನಾವೇ ಸನ್ಮಾನಿಸಿ ಕೊಲ್ಲುವುದು ನನಗೆ ಖಂಡಿತ ಇಷ್ಟವಿಲ್ಲ ಆದರೆ ಇಂತಹ ವಿಕಲಚೇತನ ಬುದ್ಧಿಮಾಂದ್ಯ ಮಕ್ಕಳೊಂದಿಗೆ ಹೊಸ ವರ್ಷ ಆಚರಿಸಿಕೊಳ್ಳುವುದು ನನಗೆ ತುಂಬಾ ಸಂತೋಷ ತಂದಿದೆ.

        ನಾವು ಗಳಿಸಿರುವ ಹಣದಲ್ಲಿ ಕೇವಲ ಶೇ10% ರಷ್ಟು ಹಣವನ್ನು ಇಂತಹ ಬಡ ವಿದ್ಯಾರ್ಥಿಗಳಿಗೆ, ವಿಕಲಚೇತನರಿಗೆ ಹಾಗೂ ಅನಾಥರಿಗೆ ಖರ್ಚು ಮಾಡಬೇಕು ಇದರಿಂದ ಸಹಾಯ ಮಾಡಿದ ನಮಗೂ ಪಡೆದ ಅವರಿಗೂ ಸಹ ತುಂಬಾ ಸಂತೋಷವಾಗುವುದು ಆದ್ದರಿಂದ ನಾವು ಗಳಿಸಿದ ಹಣದಲ್ಲಿ ಸ್ವಲ್ಪ ಹಣವನ್ನು ಬಡವರಿಗಾಗಿ ಮೀಸಲಿಡಲು ಕರೆ ನೀಡಿದರು.

         ಈ ವೇಳೆ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಪಿ.ಎಂ.ಮಹೇಶ್ ಬಹಳಷ್ಟು ಜನಪ್ರತಿನಿಧಿಗಳು, ಉಳ್ಳವರು ನಮ್ಮ ಶಾಲೆಗೆ ಆಗಾಗ ಬರುತ್ತಿರುತ್ತಾರೆ ಹಾಗೂ ಶಾಲೆಗೆ ಅದು ಕೊಡುತ್ತೇನೆ ಇದು ಕೊಡುತ್ತೇನೆ ಎಂದು ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಾರೆ.

        ಆದರೆ ನಮ್ಮ ಶ್ರೀಮತಿ ವೀಣಾರವರು ಯಾವುದೇ ಭರವಸೆಯನ್ನು ನೀಡದೆ ಮೊದಲು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಹಬ್ಬದ ಊಟ ಮತ್ತು ಸಮವಸ್ತ್ರವನ್ನು ನೀಡಿದ್ದಾರೆ ಉನ್ನತ ಹುದ್ದೆಯಲ್ಲಿರುವ ಅನೇಕ ಅಧಿಕಾರಿಗಳು ಇವರಂತೆ ಬಡವರು, ವಿಕಲಚೇತನರು ಹಾಗೂ ಬುದ್ಧಿಮಾಂದ್ಯರಿಗೆ ಸಹಾಯ ಮಾಡುವ ಹವ್ಯಾಸ ಬೆಳೆಸಿಕೊಳ್ಳಲು ಮನವಿ ಮಾಡಿದರು.ಇದೇ ವೇಳೆ ಬಾಲಕ ಅವನೀಶ್ ನ ನಾಲ್ಕನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ನೋಂದಣಿ ಕಚೇರಿಯ ಸಿಬ್ಬಂದಿಗಳಾದ ವಿಜಯ್ ಕುರಿಯರ್, ಮುರುಗೇಶ್,ಸಂಗಮೇಶ್,ನಂದಿನಿ,ಪರಮೇಶ್ವರಪ್ಪ,ಮಲ್ಲಿಕಾರ್ಜುನ ಹಾಗೂ ಬರಹಗಾರ ಬಳಗದ ಪರಶುರಾಮ್ ಸೋಲಂಕಿ,ಪಂಚಾಕ್ಷರಿ ಪಾಟೀಲ್, ಐರಣಿ ಗಣಪತಿರಾವ್, ಎಚ್.ಎಚ್.ಶಾನುಭಾಗ್, ಸಂಜೀವ್ ಕುಮಾರ್, ಜೀ,ವಿ,ಶ್ರೀನಿವಾಸ್ ರಾವ್, ವಾಗೀಶ್ವರಪ್ಪ , ಮಲ್ಲಿಕಾರ್ಜುನ ,ವಸಂತ ,ಸುರೇಶ್, ಶೇಷಾಚಲ, ಎನ್.ಚಂದ್ರಶೇಖರ್, ಮಹಮ್ಮದ್ ರಫೀಕ್, ಮಂಜುನಾಥ ರಾವ್, ಸುರೇಶ ಶಾಸ್ತ್ರಿ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link