ಮೋದಿ ದೊಡ್ಡ ಸುಳ್ಳುಗಾರ: ರಣದೀಪ್ ಸುರ್ಜೆವಾಲಾ

ನವದೆಹಲಿ:
         ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ಮೋದಿ ನೀಡಿದ ಸಂದರ್ಶನದಲ್ಲಿ ಜನರು ನಂಬುವಂತಹ ಒಂದೇ ಒಂದು ಸತ್ಯಾಂಶವನ್ನೂ ಹೇಳಿಲ್ಲ .ಈ ಸಂದರ್ಶನ ಕೇವಲ ಮೋದಿಯ ವಾಕ್ಚಾತುರ್ಯದ ಮಹಾ ಪ್ರದರ್ಶನ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ನ ರಣದೀಪ್ ಸುರ್ಜೆವಾಲ ಟೀಕಿಸಿದ್ದಾರೆ .

       ಕಾಂಗ್ರೇಸ್ ತನ್ನ ಟ್ವಿಟರ್ ಮುಖಪುಟದಲ್ಲಿ ಈ ಬಗ್ಗೆ ಟ್ವೀಟ್ ಮಾಡಿ ವಕ್ತಾರ ರಣ್ ದೀಪ್ ಸುರ್ಜೇವಾಲಾ ಅವರು, ಪ್ರಧಾನಿ ಮೋದಿ ಇತ್ತೀಚೆಗೆ ನೀಡುತ್ತಿರುವ ಸಂದರ್ಶನಗಳೂ ಸಹ ಅವರ ಭಾಷಣಗಳಂತಯೇ ಇರುತ್ತವೆ ಇದು ಆ ಪೀಳಿಗೆಗೆ ಸೇರಿದ ಒಂದು ತಾಜಾ ಉದಾಹರಣೆಯಷ್ಟೆ ಅದರಲ್ಲಿ ಹೇಳಿದರಲ್ಲಿ ಒಂದಂಶವೂ ಸತ್ಯವಿಲ್ಲ. ಅವರ ಹೇಳಿಕೆಗೂ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಚುನಾವಣೆ ಗೆಲ್ಲಲು ಅಂದು ಜನರಿಗೆ ಅವರು ನೀಡಿದ್ದ ಭರವಸೆ ಈಡೇರಿಸಿಲ್ಲ ಮತ್ತು ಇದರಿಂದ ಸಾಬೀತಾಗಿದ್ದೇನೆಂದರೆ ಮೋದಿ ಒಬ್ಬ ದೊಡ್ಡ ಸುಳ್ಳುಗಾರಎಂದು  ಎಂದು ಕಿಡಿಕಾರಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 
     

Recent Articles

spot_img

Related Stories

Share via
Copy link