ಬೆಂಗಳೂರು
ಅನೈತಿಕ ಸಂಬಂಧದ ಶಂಕೆಯ ಮೇಲೆ ಪತ್ನಿಯನ್ನು ಕೊಲೆ ಮಾಡಿ ನಾಟಕವಾಡಿದ್ದ ಪತಿ ಕೊನೆಗೆ ಜೈಲು ಸೇರಿದ ಘಟನೆ ಸೂರ್ಯಸಿಟಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಗನಾಯಕನಹಳ್ಳಿಯ ಪತ್ನಿ ವೆಂಕಟಮ್ಮ ಅವರನ್ನು ಕೊಲೆಮಾಡಿದ ಪಾತಿ ಪತಿ ಪಾಪಣ್ಣನನ್ನು ಬಂಧಿಸಿರುವ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.ಕಳೆದ ಡಿಸೆಂಬರ್ 15ರಂದು ಮಗಳ ಮನೆಗೆ ಹೋಗುತ್ತಿದ್ದ ಪತ್ನಿಯನ್ನು ಹಿಂಬಾಲಿಸಿದ್ದ ಗಂಡ ಕೈಕಾಲು ಕಟ್ಟಿ ಕೊಲೆಗೈದಿದ್ದ. ಬಳಿಕ ವಾರಗಟ್ಟಲೇ ಏನೂ ಅರಿಯದಂತೆ ಮಕ್ಕಳ ಮುಂದೆ ನಾಟಕವಾಡಿ ಪೊಲೀಸರ ತನಿಖೆಯಲ್ಲಿ ಸತ್ಯ ಬಯಲಾಗಿ ಜೈಲು ಸೇರಿದ್ದಾನೆ.
ಆನೇಕಲ್ ತಾಲೂಕಿನ ನಾಗನಾಯಕನಹಳ್ಳಿಯಲ್ಲಿ ವಾಸವಿದ್ದ ದಂಪತಿಗಳಿಗೆ ಮಕ್ಕಳು ಮೊಮ್ಮಕ್ಕಳಿದ್ದರು. ಡಿಸೆಂಬರ್ 15ರಂದು ಬೆಳಗ್ಗೆ ಬಿದರಗುಪ್ಪೆಯ ಮಗಳ ಮನೆಗೆ ವೆಂಕಟಮ್ಮ ತೆರಳಿದ್ದ ವೇಳೆ ಮರಸೂರು ಗೇಟ್ ಬಳಿ ಮಧ್ಯಾಹ್ನ 3ರ ಸಮಯದಲ್ಲಿ ಪಾಪಣ್ಣ ಹಿಂಬಾಲಿಸಿ ಕೊಲೆ ಮಾಡಿ ಮನೆಗೆ ಬಂದಿದ್ದ ಪಾಪಣ್ಣ ಏನೂ ಅರಿಯದಂತೆ ಅಮಾಯಕನಂತೆ ನಾಟಕವಾಡಿದ್ದ.
ತಾಯಿ ಪತ್ತೆಯಾಗದಿದ್ದರಿಂದ ಮಕ್ಕಳು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.ಈ ಮಧ್ಯೆ ಮರಸೂರು ಗೇಟ್ ಬಳಿಯ ಮಧುರಾ ಗಾರ್ಮೆಂಟ್ಸ್ ಹಿಂದೆ ವೆಂಕಟಮ್ಮ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ಅನುಮಾನಗೊಂಡು ಪತಿ ಪಾಪಣ್ಣರನ್ನು ವಿಚಾರಣೆಗೊಳಪಡಿಸಿದಾಗ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








