ಚಿತ್ರದುರ್ಗ;
ಮಾದಿಗರು ಬಹುದಿನಗಳಿಂದ ನಡೆಸಿಕೊಂಡು ಬಂದಿರುವ ಒಳಮೀಸಲಾತಿ ಜಾರಿ ಬಗೆಗಿನ ಹೋರಾಟ ಯಾವ ಕಾರಣಕ್ಕೂ ನಿಲ್ಲದು. ಭವಿಷ್ಯದ ದಿನಗಳಲ್ಲಿ ಈ ಚಳುವಳಿ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಜಾರಿಗೊಳಿಸಬೇಕು ಎನ್ನುವ ಚಳುವಳಿ ದಶಕಗಳಿಂದ ನಡೆಯುತ್ತಿದೆ. ಇದು ನಮ್ಮ ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಬೆಳವಣಿಗೆಗಾಗಿ ನಡೆಯುತ್ತಿರುವ ಹೋರಾಟವಾಗಿದ್ದು, ಇದು ಯಾವ ಕಾರಣಕ್ಕೂ ನಿಲ್ಲುವುದಿಲ್ಲವೆಂದು ಪುನರುಚ್ಚರಿಸಿದರು ಮಾದಿಗರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಯಾಗಬೇಕು ಎನ್ನುವ ಕೂಗು ಪ್ರಬಲವಾಗಿ ಕೇಳಿ ಬಂದಾಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿಯೇ ಆಯೋಗವನ್ನು ರಚಿಸಲಾಗಿತ್ತು. ಹಿಂದಿನ ನಮ್ಮ ಸರ್ಕಾರವೂ ಸಹ ಈ ವಿಚಾರದಲ್ಲಿ ಬದ್ದತೆ ಪ್ರದರ್ಶಿಸಿದೆ.
ಆಯೋಗದ ವರಿದಯನ್ನು ಜಾರಿಗೊಳಿಸುವ ಸಂಬಂಧ ಎಲ್ಲಾ ಸಮಾಜದ ಮುಖಂಡರ ಜೊತೆಗೂ ಒಮ್ಮೆ ಸಮಾಲೋಚನೆ ನಡೆಸಲಾಗಿತ್ತು ಎಂದು ಅವರು ತಿಳಿಸಿದರು
ಸದಾಶಿವ ಆಯೋಗದ ವರದಿ ಜಾರಿಯಾದರೆ ಲಂಬಾಣಿ, ಬೋವಿ ಇನ್ನಿತರೆ ಜನಾಂಗಕ್ಕೆ ಪೆಟ್ಟು ಬೀಳುತ್ತದೆ ಎಂದು ಕೆಲವರು ಅಪಪ್ರಚಾರ ಮಾಡಿದರು. ಇದರಿಂದ ಸಾಕಷ್ಟು ಗೊಂದಲ ಸೃಷ್ಟಿಯಾಗಿ ಅದು ಜಾರಿಯಾಗಲು ವಿಳಂಬವಾಗಿದೆ. ಈಗಿನ ಸರ್ಕಾರಕ್ಕೂ ನಾವು ಈ ವಿಚಾರದಲ್ಲಿ ಒತ್ತಡ ತರುತ್ತಿದ್ದೇವೆ ಎಂದು ತಿಳಿಸಿದರು
ಕಳೆದ ಅಕ್ಟೋಬರ್‍ನಲ್ಲಿ ನಡೆದ ಚಳುವಳಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾನೂ ಸೇರಿದಂತೆ ಹಲವು ನಾಯಕರೊಂದಿಗೆ ಚರ್ಚಿಸಿದ್ದು, ವರದಿ ಶಿಫಾರಸ್ಸಿಗೆ ಭರವಸೆ ನೀಡಿದ್ದಾರೆ ಎಂದರು ಆಂದ್ರಪ್ರದೇಶದಲ್ಲಿ ಮೀಸಲಾತಿಗಾಗಿ ದೊಡ್ಡ ಮಟ್ಟದ ಚಳವಳಿ ನಡೆದಿದೆ.
ಒಮ್ಮೆ ಹೈದರಾಬಾದ್ ದಿಗ್ಬಂಧನ ಚಳುವಳಿ ನಡೆದಾಗ ಲಕ್ಷಾಂತರ ಜನ ಸೇರಿದ್ದರು. ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜನಾಂಗದ ಬೇಡಿಕೆಗೆ ಸ್ಪಂದಿಸಿದ್ದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡುವ ಪ್ರಸ್ತಾವಣೆಯನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಕೆಲವು ರಾಜ್ಯಗಳು ಸಲ್ಲಿಸಿವೆ. ಕೇಂದ್ರ ಸರ್ಕಾರವೇ ಈ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಆಂಜನೇಯ ಹೇಳಿದರು
ಅಭಿವೃದ್ದಿ ನಿಗಮ ಲೋಕಾರ್ಪಣೆ
ಇದೇ ತಿಂಗಳ 17ರಂದು ಬೆಂಗಳೂರಿನಲ್ಲಿ ಆದಿಜಾಂಭವ ಅಭಿವೃದ್ದಿ ನಿಗಮದ ಲೊಕಾರ್ಪಣೆ ಕಾರ್ಯಕ್ರಮ ಜರುಗಲಿದ್ದು, ಅಂದು ಭಾರೀ ಸಂಖ್ಯೆಯಲ್ಲಿ ಜನಾಂಗದವರು ಜಮಾಯಿಸುವರು ಎಂದು ಮಾಜಿ ಸಚಿವ ಹೆಚ್.ಆಂಜನೇಯ ತಿಳಿಸಿದರುನಿಗಮ ಲೋಕಾರ್ಪಣೆ ಮಾಡುತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಿಂದನೆ ಹಾಗೂ ಇದಕ್ಕೆ ಕಾರಣರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಮರ್ಪಣೆ ಮಾಡಲಾಗುವುದು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಸಲುವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾದಿಗ ಸಮುದಾಯದ ಮುಖಂಡರುಗಳ ಜೊತೆ ಸಮಾಲೋಚನಾ ಸಭೆಯನ್ನು ನಡೆಸಲಾಗುತ್ತಿದೆ. ಬುಧವಾರ ತುಮಕೂರಿನಲ್ಲಿ ಸಭೆ ನಡೆದಿದ್ದು, ಜ.4ರಂದು ಚಿತ್ರದುರ್ಗ, 5ರಂದು ಬೆಂಗಳೂರು, 6ರಂದು ರಾಮನಗರದಲ್ಲಿ ಸಭೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು
ಮಾದಿಗರ ಸ್ಥಿತಿಗತಿ ಇನ್ನೂ ಸುಧಾರಣೆಯಾಗಿಲ್ಲ. ನಿಗಮ ಸ್ಥಾಪನೆಯಿಂದ ನಮ್ಮ ಸಮುದಾಯದ ಆರ್ಥಿಕ ಪರಿಸ್ಥಿತಿ ಸ್ಪಲ್ಪ ಮಟ್ಟಿಗೆ ಸುಧಾರಣೆಯಾಗಲಿದೆ. ಈಗಾಗಲೇ ಬೋವಿ, ಬಂಜಾರ ಜನಾಂಗವೂ ಸೇರಿದಂತೆ ಇತರೆ ಜನಾಂಗಳ ನಿಗಮವೂ ಅಸ್ತಿತ್ವದಲ್ಲಿದ್ದು, ಆಯಾ ಜಾತಿಗಳ ಜನಸಂಖ್ಯೆಗೆ ತಕ್ಕಂತೆ ಅನುದಾನ ಹಂಚಿಕೆ ಮಾಡಲು ಸರ್ಕಾರ ಆದೇಶಿಸಿದೆ ಎಂದು ಆಂಜನೇಯ ತಿಳಿಸಿದರು
ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಡಿ.ಎನ್,ಮೈಲಾರಪ್ಪ, ದುರುಗೇಶಪ್ಪ, ಶರಣಪ್ಪ ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹ ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ