ಬೆಂಗಳೂರು:
ಕೇರಳ ಸರ್ಕಾರ ಗಲಭೇ ನಿಯಂತ್ರಣದ ಹೆಸರಲ್ಲಿ ಹಿಂದೂಗಳ ಮೇಲೆ ತನ್ನ ಅಧಿಕಾರದ ಅಹಂನಲ್ಲಿ ಅತ್ಯಾಚಾರ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಆರೋಪಿದ್ದಾರೆ.
ಶಬರಿಮಲೆ ವಿವಾದವನ್ನು ತಹಬಂದಿಗೆ ತರುವಲ್ಲಿ ಅಲ್ಲಿನ ಸರ್ಕಾರವೂ ಸಂಪೂರ್ಣ ವಿಫಲವಾಗಿದ್ದು ಹಿಂದೂಗಳ ಮೇಲೆ ಹಾಡಹಗಲೇ ಅತ್ಯಾಚಾರ’ ನಡೆಸಿದೆ ಎಂದು ಅವರು ಕಿಡಿಕಾರಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವನ್ನು ನಾನು ಒಪ್ಪುತ್ತೇನೆ ಆದರೆ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಅಧೀನದಲ್ಲಿ ಬರುವ ವಿಷಯಗಳು ಈ ಕುರಿತಂತೆ ಸಾರ್ವಜನಿಕರೊಡನೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತಿಳುವಳಿಕೆಯನ್ನು ಇಟ್ಟುಕೊಂಡಿರಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








