ತೀಕ್ಷ್ಣಪ್ರತ್ಯಂಗರದೇವಿ ಮಹಾ ಹೋಮ.

ಹರಪನಹಳ್ಳಿ:

       ಪಟ್ಟಣದ ವಾಲ್ಮೀಕಿನಗರದ ಸುಭಂಜಪ್ಪನ ಜಮೀನಿನಲ್ಲಿ ಪ್ರತ್ಯಂಗರ ದೇವಿಯ ಹೋಮವನ್ನು ಜ.5ರ ಅಮವಾಸ್ಯೆ ರಾತ್ರಿ 8ಗಂಟೆಗೆ 1,008 ಕೆ.ಜಿ. ಒಣಮೆಣಸಿನಕಾಯಿಯ ಹೋಮವನ್ನು ಅಘೋರ ಟೀನ್ ಗಣಪತಿ ರ್ಯಾಟ್ ರವರು ನೆರವೇರಿಸಲಿದ್ದಾರೆ.
ಪ್ರ್ಯತಂಗರ ದೇವಿಯ ಹೋಮದಲ್ಲಿ ಪಾಲ್ಗೊಳ್ಳುವುದರಿಂದ ಭೂಮಿ ಖರೀದಿ, ಮಾರಾಟ, ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿಪಡೆಯಬಹುದು ಆದ್ದರಿಂದ ಆಸಕ್ತರು ಹೋಮದಲ್ಲಿ ಪಾಲ್ಗೊಂಡು ಪ್ರತ್ಯಂಗರ ದೇವಿಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

        ಅಮಾವಾಸ್ಯೆಯಂದೇ ಪೂಜಿಸುವ ಹಾಗೂ ಆರಾಧಿಸುವ ಮಾಂತ್ರಿಕರಿಗೆ ಮತ್ತು ತಾಂತ್ರಿಕರಿಗೆ ಆರಾದ್ಯ ದೇವತೆಯಾದ ಅತ್ಯಂತ ಶಕ್ತಿಯುಳ್ಳ ತೀಕ್ಷ್ಣಪ್ರತ್ಯಂಗರ ದೇವಿಯನ್ನು 30 ವರ್ಷಗಳಿಂದ ಭರತಖಂಡದಲ್ಲಿ 29 ರಾಷ್ಟ್ರಗಳಲ್ಲಿ 108 ಕೆ.ಜಿ ಯಿಂದ 10,008 ಕೆಜಿ ಕೆಂಪು ಮೆಣಸಿನಕಾಯಿ ಮತ್ತು ಅನೇಕ ಸಾಂಬಾರು ಪದಾರ್ಥಗಳಿಂದ ಮಹಾಯಜ್ಞವನ್ನು ಮಾಡಿಕೊಂಡು ಬರುತ್ತಿದ್ದಾರೆ.

        ಗುರೂಜಿಯವರು 2018ರ ಸೆಪ್ಟೆಂಬರ್ 8 ರಂದು ಹರಿದ್ವಾರದಿಂದ ಪಾದಯಾತ್ರೆ ಮೂಲಕ ಹರಪನಹಳ್ಳಿ ಪಟ್ಟಣಕ್ಕೆ ಬಂದು ನೆಲೆಸಿರುವ ಇವರು ಭಕ್ತರಿಂದ ಯಾವುದೇ ರೀತಿಯ ಹಣವನ್ನು ಸ್ವೀಕರಿಸುವುದಿಲ್ಲ. ಅಘೋರ ತತ್ವದಲ್ಲಿ ಆಹಾರ ಸೇವನೆಯನ್ನು ಮಾಡುವ ಇವರು, ತಾಲೂಕಿನಲ್ಲಿ ಕೋಟಿ ಲಿಂಗೇಶ್ವರ ಸ್ಥಾಪನೆ ಮಹಾ ಉದ್ದೇಶವನ್ನು ಹೊಂದಿದ್ದಾರೆ.ವಿಶೇಷವಾಗಿ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಹಾಗೂ ಸಿನಿಮಾ ರಂಗದವರು ಪ್ರತ್ಯಂಗರ ದೇವಿ ಮಹಾ ಹೋಮವನ್ನು ಮಾಡಿಸಿಕೊಳ್ಳುತ್ತಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link