ಲಕ್ನೋ
ಸಧ್ಯ ಭಾರತದಲ್ಲಿ ಯಾರಿಗೂ ಸಹ ವಾಕ್ ಸ್ವಾತಂತ್ರ್ಯವೇ ಇಲ್ಲ ಎಂದು ಹೇಳಿವ ಮೂಲಕ ಕಾಂಗ್ರೇಸ್ ರಾಜ್ಯಾಧ್ಯಕ್ಷರೊಬ್ಬರು ಹೇಳಿಕೆ ನೀಡಿದ್ದಾರೆ.
ಭಾರಯತದಲ್ಲಿ ನಮಗೆ ಅಕ್ಷಣೆ ಇಲ್ಲ ಎನ್ನುವವರಿಗೆ ಬಾಂಬ್ ಹಾಕಬೇಕು, ನನಗೆ ಸಚಿವ ಸ್ಥಾನ ನೀಡಿದರೆ ಇವರಿಗೆಲ್ಲ ಬಾಂಬ್ ಹಾಕುತ್ತೇನೆ” ಎಂದು ಬಿಜೆಪಿ ಶಾಸಕ ವಿಕ್ರಮ್ ಸೈನಿ ನೀಡಿದ ಹೇಳಿಕೆಯಿಂದ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ತರಾಟೆಗೆ ತೆಗೆದುಕೊಂಡಿದ್ದಾರೆ.
“ಕೇಸರಿ ಪಕ್ಷದ ಮುಖಂಡ ಸೈನಿ ಒಬ್ಬ ಭಯೋತ್ಪಾದಕರಂತೆ ಮಾತನಾಡುತ್ತಾರೆ. ಅವರಿಗೆ ಭಯೋತ್ಪಾದಕರ ಸಂಪರ್ಕ ಇರುವಂತೆ ಕಾಣುತ್ತದೆ. ಅವರ ವಿರುದ್ಧ ತನಿಖೆಯಾಗಬೇಕು” ಎಂದು ಬಬ್ಬರ್ ಕಿಡಿಕಾರಿದ್ದಾರೆ . “ಭಯೋತ್ಪಾದಕರಂತೆ ಈ ರೀತಿ ಪ್ರಚೋದನಾಕಾರಿಯಾಗಿ ಮಾತನಾಡುವವರನ್ನು ಮೊದಲು ಜೈಲಿಗಟ್ಟಿ ಶಿಕ್ಷೆ ನೀಡಬೇಕು. ಇವರಿಗೆ ಉಗ್ರರ ಲಿಂಕ್ ಇದ್ದಂತಿದೆ” ಎಂದು ಅವರು ಆರೋಪಿಸಿದ್ದಾರೆ.








