ಹರಪನಹಳ್ಳಿ:
ತಾಲ್ಲೂಕಿನ ದೇವರ ತಿಮಲಾಪುರ ಗ್ರಾಮದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ತಾಲ್ಲೂಕು ಕೊರಮ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಂಘದ ನೂತನ ಗೌರವ ಅಧ್ಯಕ್ಷರಾಗಿ ಚೌಡಪ್ಪ ಹರಿಯಮ್ಮನಹಳ್ಳಿ, ಅಧ್ಯಕ್ಷರಾಗಿ ಭಜಂತ್ರಿ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಮುತ್ತಗಿ ಹಾಲಪ್ಪ, ಕಾರ್ಯದರ್ಶಿ ಬಂಡ್ರಿ ಕಾಳೇಶಪ್ಪ, ಸಹ ಕಾರ್ಯದರ್ಶಿ ಟಿ.ಗಂಗಪ್ಪ, ಸಂಘಟನಾ ಕಾರ್ಯದರ್ಶಿ ಮೀಸಿ ದುರುಗಪ್ಪ, ಸಂಚಾಲಕರಾಗಿ ಕೆ.ಪ್ರಕಾಶ್, ಮಾರುತಿ ಮತ್ತೂರು, ಹನುಮಕ್ಕ ಹಿರೇಮೆಗಳಗೆರೆ, ಮಲ್ಲಿಕಾರ್ಜುನ್ ನೇಮಕ ಮಾಡಲಾಯಿತು.
ಇದೇ ವೇಳೆ ತಾಲ್ಲೂಕು ಕೊರಮ ಯುವಕ ಸಂಘ ಅಸ್ತಿತ್ವಕ್ಕೆ ಬಂದಿತು. ಗೌರವ ಅಧ್ಯಕ್ಷರಾಗಿ ಎಂ.ದ್ಯಾಮಪ್ಪ, ಅಧ್ಯಕ್ಷರಾಗಿ ರಾಜಕುಮಾರ, ಉಪಾಧ್ಯಕ್ಷ ಆನಂದಪ್ಪ, ಕಾರ್ಯದರ್ಶಿ ಕೆ.ಬಸವರಾಜ, ಸಹ ಕಾರ್ಯದರ್ಶಿ ತುಕಾರಾಂ, ಖಜಾಂಚಿ ಬಸವರಾಜ ಬುಲೆಟ್, ಸಂಚಾಲಕರಾಗಿ ಬಸವರಾಜ ವಕೀಲರು, ವಸಂತ, ನಾಗರಾಜ, ಪಾಂಡುರಂಗಪ್ಪ, ಪರಸಪ್ಪ ಅವರನ್ನು ನೇಮಕ ಮಾಡಲಾಯಿತು .ಮುಖಂಡರಾದ ಎಚ್.ಎ.ಭಜಂತ್ರಿ, ಪೂಜಾರ ಕುಮಾರಣ್ಣ ಹಾಗೂ ತಾಲ್ಲೂಕು ಕೊರಮ ಸಮಾಜದ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ