ಅನೈತಿಕ ಸಂಬಂಧ: ಪತಿಯ ಕೊಲೆಗೆ ಸುಪಾರಿ ನೀಡಿದ ಪತ್ನಿ

ಬೆಂಗಳೂರು

         ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ನೀಡಿ ಕೊಲೆ ಮಾಡಲು ಸಂಚು ರೂಪಿಸಿದ್ದ ಪತ್ನಿ ಆಕೆಯ ಪ್ರಿಯಕರ ಅಲ್ಲದೇ ಕೊಲೆಗೆ ಸುಫಾರಿ ಪಡೆದಿದ್ದ ಅಪ್ರಾಪ್ತ ಯುವಕ ಸೇರಿ 6ಮಂದಿ ಆರೋಪಿಗಳನ್ನು ಹುಳಿಮಾವು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

        ಅರಕೆರೆಯ ಬಿಟಿಎಸ್ ಲೇಔಟ್‍ನ ಮಮತಾ (28), ಆಕೆಯ ಪ್ರಿಯಕರ ಪ್ರಶಾಂತ್ (20) ಇವರಿಂದ ಸುಫಾರಿ ಪಡೆದಿದ್ದ ರಪ್ಪನಪಾಳ್ಯದ ಅನಿಲ್ ಬಿಸ್ವಾಸ್ (21), ಜಾಕಿರ್ ಪಾಷ ಅಲಿಯಾಸ್ ಜಾಕ್ (20), ಆಡುಗೋಡಿಯ ಹರೀಶ್ ಕುಮಾರ್ ಅಲಿಯಾಸ್ ಗಲಗಲ (20)ನನ್ನು ಬಂಧಿಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ಬಾಲಕನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಳ್ಳಲಾಗಿದೆ.

         ಕಳ್ಳತನ ನಡೆಸುವ ನಾಟಕ ಮಾಡಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಮತಾ ಅವರ ಪತಿ ನಾಗರಾಜ್ ಅವರನ್ನು ಕೊಲೆ ಮಾಡಲು ಆರೋಪಿಗಳು ರೂಪಿಸಿದ್ದ ಸಂಚು ಕುಡಿಯುವ ನೀರು ತಂಡು ಕೊಡುತ್ತಿದ್ದ ಯುವಕನ ಪ್ರವೇಶದಿಂದ ವಿಫಲವಾಗಿತ್ತು ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

      ಅನೈತಿಕ ಸಂಬಂಧ

           ಪೇಟಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ್ ಅವರನ್ನು 11 ವರ್ಷಗಳ ಹಿಂದೆ ವಿವಾಹವಾಗಿದ್ದ ಆರೋಪಿ ಮಮತಾಗೆ 10 ವರ್ಷದ ಗಂಡು ಮಗನಿದ್ದಾನೆ ಕಳೆದ ಕೆಲವು ವರ್ಷಗಳಿಂದ ದಂಪತಿ ಅರಕೆರೆಯ ಬಿಟಿಎಸ್ ಲೇಔಟ್‍ನ ಪ್ರಶಾಂತ್ ಅವರ ತಂದೆ ಚಂದ್ರಶೇಖರ್ ಅವರ ಮನೆಯಲ್ಲಿ ಕೆಲವು ವರ್ಷಗಳಿಂದ ಬಾಡಿಗೆಗೆ ಇದ್ದರು.

          ಬಾಡಿಗೆಗಿದ್ದ ಮಮತಾಳನ್ನು ಪ್ರಶಾಂತ್ ಪರಿಚಯ ಮಾಡಿಕೊಂಡಿದ್ದ ವಯಸ್ಸನಲ್ಲಿ ತನಗಿಂತ 8 ವರ್ಷ ಕಿರಿಯವನಾದ ಪ್ರಶಾಂತ್ ಮೋಹಕ್ಕೆ ಸಿಲುಕಿದ್ ಮಮತಾ ಆತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ದಿನ ಕಳೆದಂತೆ ಈ ವಿಷಯ ಪತಿ ನಾಗರಾಜ್‍ಗೆ ಗೊತ್ತಾಯಿತು. ಪತ್ನಿಯನ್ನು ಸಂಶಯದಿಂದ ನೋಡಿ ಜಗಳ ಮಾಡುತ್ತಿದ್ದ ನಾಗರಾಜ್ ಬಾಡಿಗೆಗಿದ್ದ ಮನೆ ಖಾಲಿ ಮಾಡಲು ಮುಂದಾಗಿದ್ದು ಇದರಿಂದ ಮಮತಾ ಆಕ್ರೋಶಗೊಂಡಿದ್ದಳು.

    ಕೊಲೆಗೆ ಸಂಚು

         ಪತಿ ನಾಗರಾಜ್ ಬದುಕಿದ್ದರೆ ನಮ್ಮ ಅಕ್ರಮ ಸಂಬಂಧ ಮುಂದುವರೆಸುವುದು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದ ಮಮತಾ ಪ್ರಿಯಕರ ಪ್ರಶಾಂತ್ ಜೊತೆ ಚರ್ಚಿಸಿ ಇಬ್ಬರು ಸೇರಿ ಕೊಲೆಗೆ ಸಂಚು ರೂಪಿಸಿದರು ಅದರಂತೆ ಕೊಲೆಗಾರರಿಗೆ ಸುಪಾರಿ ಕೊಡಲು ಎರಡು ತಾಳಿ, ಎರಡು ಚಿನ್ನದ ಕಾಸು, ಚಿನ್ನದ ಗುಂಡುಗಳಿರುವ ಮಾಂಗಲ್ಯಸರವನ್ನು ನೀಡಲು ಮುಂದಾಗಿ ಒಂದೂವರೆ ಲಕ್ಷ ಹಣ ಸೇರಿಸಿದ್ದರು.

       ಆರೋಪಿಗಳಾದ ಅನಿಲ್ ಬಿಸ್ವಾಸ್, ಜಾಕೀರ್ ಪಾಷ ಹಾಗೂ ಹರೀಶ್ ಕುಮಾರ್, ಅಪ್ರಾಪ್ತ ಬಾಲಕನಿಗೆ 1.5 ಲಕ್ಷ ರೂ. ನೀಡಿ ಕೊಲೆಗೆ ಸಂಚು ರೂಪಿಸಿದ್ದರು. ಕಳ್ಳತನ ಮಾಡಿಸಿ ಕೊಲೆ ಮಾಡಿಸಿದರೆ, ಪೊಲೀಸರಿಂದ ಸುಲಭವಾಗಿ ಪಾರಾಗಬಹುದು ಎಂಬ ಕಾರಣಕ್ಕೆ ಅದೇ ರೀತಿಯ ಕೃತ್ಯಕ್ಕೆ ಇವರೆಲ್ಲರೂ ಮುಂದಾಗಿದ್ದರು.

      ಮನೆಗೆ ನುಗ್ಗಿ ಕೃತ್ಯ

     ಅದರಂತೆ ಕಳೆದ ಡಿಸೆಂಬರ್ 14 ರಂದು ರಾತ್ರಿ 9.15ರ ವೇಳೆ ನಾಗರಾಜ್ ಅವರು ಊಟ ಮಾಡಿ ಟಿವಿ ನೋಡುತ್ತ ಕುಳಿತಿದ್ದಾಗ ಜೂಮ್ ಕಾರಿನಲ್ಲಿ ಬಂದು ಹೊರಗೆ ನಿಲ್ಲಿಸಿ ಮನೆಗೆ ಏಕಾಎಕಿ ಅನಿಲ್ ಬಿಸ್ವಾಸ್, ಜಾಕೀರ್ ಪಾಷ ಹಾಗೂ ಹರೀಶ್ ಕುಮಾರ್, ಅಪ್ರಾಪ್ತ ಯುವಕ ನಾಲ್ವರು ಬಂಧಿತ ಆರೋಪಿಗಳು ನುಗ್ಗಿ ನಾಗರಾಜ್ ಅವರನ್ನು ಬೆದರಿಸಿ ಚಿನ್ನದ ಸರ, ಮೊಬೈಲ್ ಕಸಿದು, ಮಮತಾ ಅವರ ಕೈಯಲ್ಲಿದ್ದ ಚಿನ್ನದ ಉಂಗುರಗಳನ್ನು ದೋಚಿ ನಾಗರಾಜ್ ಮೇಲೆ ಹಲ್ಲೆಗೆ ಮುಂದಾದರು.

         ನಾಗರಾಜ್ ಅದೃಷ್ಟ ಚೆನ್ನಾಗಿತ್ತು. ಈ ವೇಳೆ ಮನೆಗೆ ಮಣಿ ಎಂಬುವವರು ಕುಡಿಯುವ ನೀರಿನ ಕ್ಯಾನ್ ತೆಗೆದುಕೊಂಡು ಬಂದು ಬಾಗಿಲು ಬಡಿದಾಗ ಹೆದರಿದ ನಾಲ್ವರು ಆರೋಪಿಗಳು ಪಕ್ಕದ ಬಿಲ್ಡಿಂಗ್ ಮೇಲೆ ನೆಗೆದು ಅಲ್ಲಿಂದ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಹುಳಿಮಾವು ಪೊಲೀಸರಿಗೆ ಮಮತಾ ಅವರ 10 ವರ್ಷದ ಪುತ್ರ ಕೃತ್ಯವೆಸಗಿದ ಆರೋಪಿಗಳನ್ನು ಹಿಂದೆ ಪ್ರಶಾಂತ್ ಜೊತೆ ಇರುವುದನ್ನು ನೋಡಿದ ಮಾಹಿತಿ ನೀಡಿದ್ದ.

         ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಎರಡು ಚಿನ್ನದ ತಾಳಿ, ಎರಡು ಚಿನ್ನದ ಕಾಸು, ಆರು ಚಿನ್ನದ ಗುಂಡು, ಮೂರು ಹವಳಗಳ ಚಿನ್ನದ ಮಾಂಗಲ್ಯಸರ, ಚಿನ್ನದ ಓಲೆ, ಮಾಟಿ, ಚಿನ್ನದ ಚೈನು, ಕೃತ್ಯಕ್ಕೆ ಬಳಸಿದ ಝೂಮ್ ಕಾರು, ಡಿಯೋ ಸ್ಕೂಟರ್ ಹಾಗೂ ಕೃತ್ಯಕ್ಕೆ ಬಳಸಿದ ಮಂಕಿ ಕ್ಯಾಪ್‍ಗಳನ್ನು ವಶಪಡಿಸಿಕೊಂಡಿದ್ದಾರೆಆರೋಪಿಗಳನ್ನು ಹುಳಿಮಾವು ಪೆÇಲೀಸ್ ಇನ್ಸ್‍ಪೆಕ್ಟರ್ ಚಂದ್ರ ಮತ್ತು ಅವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖತರ್ನಾಕ್ ಮಮತಾ
ವಿಚಾರಣೆಯಲ್ಲಿ ಮಮತಾ, ಮನೆ ಮಾಲೀಕನ ಪುತ್ರ ಪ್ರಶಾಂತ್ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಆತನ ಜೊತೆ ಓಡಿಹೋಗಿ ಜೀವನ ಸಾಗಿಸಲು ಸುಪಾರಿ ಕೊಟ್ಟು ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾಳೆ. ನೀರಿನ ಕ್ಯಾನ್ ತೆಗೆದುಕೊಂಡು ಮಣಿ ಬಾಗಿಲು ಬಡಿಯದಿದ್ದರೆ, ಆರೋಪಿಗಳು, ನಾಗರಾಜ್ ಅವರನ್ನು ಅಂದೇ ಕೊಲೆ ಮಾಡುತ್ತಿದ್ದರು ಕಳ್ಳತನದ ಕೃತ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದಂತೆ ಹೆದರಿದ ಆರೋಪಿಗಳು ನಾಗರಾಜ್ ಮನೆ ಬಳಿ ಸುಳಿಯದಂತೆ ಪರಾರಿಯಾಗಿದ್ದರು ಎನ್ನುವುದು ವಿಚಾರಣೆಯಲ್ಲಿ ಕಂಡುಬಂದಿದೆ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link