ಬೆಂಕಿ ತಗುಲಿ 20 ಲೋಡ್ ರಾಗಿ ಬವಣೆ ಭಸ್ಮ

ತಿಪಟೂರು

       ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ಗುಡಿಗೊಂಡನಹಳ್ಳಿಯಲ್ಲಿ ಸೋಮವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 20ಕ್ಕೂ ಹೆಚ್ಚು ಲೋಡ್ ರಾಗಿ ಸಮೇತ ಹುಲ್ಲು ಮತ್ತು ಒಂದು ದ್ವಿಚಕ್ರವಾಹನ ಸಂಪೂರ್ಣವಾಗಿ ಭಸ್ಮವಾಗಿದ ಘಟನೆ ವರದಿಯಾಗಿದೆ.
ಮಹಾಲಿಂಗಪ್ಪನವರ ಗುಡಿಗೊಂಡನಹಳ್ಳಿ ಸರ್ವೇ ನಂ : 100/3ರಲ್ಲಿ ಬೆಳದ ರಾಗಿಯು ಸುಮಾರು 1.5 ರಿಂದ 2 ಲಕ್ಷ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳೀಯರು ಟ್ಯಾಂಕರ್‍ನಲ್ಲಿ ನೀರುತಂದು ಬೆಂಕಿನಂದಿಸಲು ಪ್ರಯತ್ನಿಸಿದ್ದು, ಅಗ್ನಿಶಾಮಕ ವಾಹನವು ಬರುವ ವೇಳೆಗೆ ಬವಣೆ ಭಾಗಶಃ ಭಸ್ಮವಾಗಿದೆ. ಪ್ರಕರಣ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link