ಅಹಮದಾಬಾದ್
ಬಿಜೆಪಿ ಮುಖಂಡ, ಮಾಜಿ ಶಾಸಕರೊಬ್ಬರನ್ನು ರೈಲಿನಲ್ಲಿ ಪ್ರಯಾಣಿಸುವಾಗ ಬರ್ಬರವಾಗಿ ಹತ್ಯೆ ಮಾಡಲಾಗಿದೆ .ಗುಜರಾತ್ ನ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಜಯಂತಿಲಾಲ್ ಭಾನುಶಾಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಬಲಿಯಾಗಿರುವ ಘಟನೆ ಗುಜರಾತಿನಲ್ಲಿ ನಡೆದಿದೆ.
ಸಯ್ಯಾಜಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜಯಂತಿಲಾಲ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಭುಜ್‍ನಿಂದ ಅಹಮದಾಬಾದ್‍ಗೆ ತೆರಳುತ್ತಿದ್ದರೆನ್ನಲಾಗಿದ್ದು ಟಾರಿಯಾ ಮತ್ತು ಸುರ್ಬರಿ ರೈಲು ನಿಲ್ದಾಣಗಳ ನಡುವೆ ಈ ಕೃತ್ಯ ಎಸಗಲಾಗಿದೆ. ಹಂತಕರು ಅವರ ಎದೆ ಹಾಗೂ ಒಂದು ಕಣ್ಣಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.