ಧಾರವಾಡ:
ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೊಂದು ಹೊಸ ವಿವಾದ ತಲೆಯತ್ತಿದೆ. ಅದೇನೆಂದರೆ ಅತಿಥಿಗಳ ಪೂರ್ಣಕುಂಭ ಸ್ವಾಗತಕ್ಕೆ ನಿಂತ ಮಹಿಳೆಯರು ಧರಿಸಿದ ಸೀರೆಯ ಬಗ್ಗೆ ವಿವಾದ ಎದಿದೆ.
ಸಮ್ಮೇಳನದಲ್ಲಿ ಮಹಿಳೆಯರು ಧರಿಸಿದ 5 ಮೀಟರ್ ಗಳ ಸೀರೆಯನ್ನು ಕರ್ನಾಟಕದಿಂದ ಖರೀದಿಸುವ ಬದಲು ಸಂಘಟಕರು ಗುಜರಾತ್ ನಿಂದ ತರಿಸಿದ್ದಾರೆ ಎಂದು ಆರೋಪಿಸಲಾಗಿದೆ . ಸಮ್ಮೇಳನ ಉದ್ಘಾಟನೆಯಲ್ಲಿ ಅತಿಥಿಗಳ ಪೂರ್ಣ ಕುಂಭ ಸ್ವಾಗತಕ್ಕೆ ಸುಮಾರು 1,051 ಸೀರೆಗಳನ್ನು ತರಿಸಲಾಗಿತ್ತು. ಗುಜರಾತ್ ನಲ್ಲಿ ಸುಲಭವಾಗಿ ಕಡಿಮೆ ಬೆಲೆಗೆ ಸೀರೆಗಳು ಸಿಕ್ಕಿದ ಕಾರಣ ಅಲ್ಲಿಂದ ತರಿಸಲಾಗಿದೆ ಎಂಬುದು ಸಂಘಟಕರ ಸಬೂಬಾಗಿದೆ ಹೇಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.ಇದೆಲ್ಲವನ್ನು ನೋಡಿದರೆ ಅಕ್ಷರ ಜಾತ್ರೆ ಕೊಂಚ ವಿವಾದಗಳ ಜಾತ್ರೆಯಾಗಿದೆ ಎಂದೆನಿನುತತ್ತದೆ.