57 ವರ್ಷದ ಈಶ್ವರ್ ಎಂಬುವವರೇ ಆತ್ಯಹತ್ಯೆ ಮಾಡಿಕೊಂಡು ಸಾವಿಗೀಡಾಗಿರುವ ಮೃತ ಪ್ರಾಧ್ಯಾಪಕ. ಡಿಸೆಂಬರ್ 9 ರಂದು ವಾಯುವಿಹಾರಕ್ಕೆ ತೆರಳಿದ್ದ ಈಶ್ವರ್ ವಾಪಸ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಎನ್ಇಪಿಎಸ್ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ನಗರದ ಹೊರವಲಯದ ಹೆಚ್ಎಂಟಿ ಪ್ರದೆಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಶನಿವಾರ ಅಪರಿಚಿತ ಶವ ಎಂದು ಜಿಲ್ಲಾ ಶವಾಗಾರದಲ್ಲಿ ಇರಿಸಲಾಗಿತ್ತು. ಇಂದು ಈಶ್ವರ್ ಕುಟುಂಬದವರು ಶವದ ಮೇಲಿದ್ದ ಬಟ್ಟೆ, ಚಪ್ಪಲಿ, ಜೇಬಿನಲ್ಲಿದ್ದ ದೇವರ ಪ್ರಸಾದದಿಂದ ಗುರುತು ಪತ್ತೆ ಮಾಡಲಾಗಿದೆ.