ಬರಗೂರು :
ಗ್ರಾಮೀಣ ಭಾಗದಲ್ಲಿಯೇ ಪದವಿ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದ ಶಿರಾ ತಾಲ್ಲೂಕು ಬರಗೂರಿನಲ್ಲಿ ಜ್ಞಾನಜ್ಯೋತಿ ವಿದ್ಯಾ ಸಂಸ್ಥೆಯನ್ನು 2005-06ರಲ್ಲಿ ಸ್ಥಾಪಿಸಿ, 2007-08ರಲ್ಲಿ ಪದವಿ ಪೂರ್ವ ಕಾಲೇಜು ಹಾಗೂ 2011-12ರಲ್ಲಿ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್ನ್ನು ಸಂಸ್ಥಾಪಕರಾದ ಡಿ.ಆರ್ ನಾಗಣ್ಣನವರು ಪ್ರಾರಂಭಿಸಿದರು.

ಕೇವಲ 28 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಸಂಸ್ಥೆಯು ಇಂದು 692 ವಿದ್ಯಾರ್ಥಿಗಳನ್ನು ಒಳಗೊಂಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕೈ ಹಿಡಿದಿದ್ದಾರೆ.
ಶಾಲಾ, ಕಾಲೇಜು ಪ್ರಾರಂಭವಾದ ದಿನದಿಂದಲೂ ಯಾವುದಕ್ಕೂ ಡಿಮ್ಯಾಂಡ್ ಮಾಡದೆ ಕಡಿಮೆ ವೆಚ್ಚದಲ್ಲಿ ಶಿಸ್ತು ಬದ್ದವಾದ ಗುಣಮಟ್ಟದ ಶಿಕ್ಷಣವನ್ನು ಹಾಗೂ ಉತ್ತಮ ಫಲಿತಾಂಶವನ್ನು ಪ್ರತಿ ಮಾಹೆಯಲ್ಲಿ ನೀಡುತ್ತಾ, ಉತ್ತಮ ಶಿಕ್ಷಕರು ಹಾಗೂ ಉಪನ್ಯಾಸಕರುಗಳ ಪರಿಶ್ರಮದಿಂದ ದಾರಿ ದೀಪವಾಗಿದೆ.
2017-18 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಒಟ್ಟಾರೆ ಶೇ 95% ರಷ್ಟು ಫಲಿತಾಂಶ ಲಭಿಸಿರುತ್ತದೆ. ಅರ್ಪಿತಾ ನಾಯಕ ಬಿ.ಎನ್ 94 %, ಮಾನಸ ಎಲ್ 90.33%, ರಷ್ಟು ಫಲಿತಾಂಶವನ್ನು ಪಡೆದಿರುತ್ತಾರೆ. ಬಹುತೇಕ ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, ಪ್ರಥಮ ದರ್ಜೆ, ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗುತ್ತಾ ಬಂದಿರುವುದು ಈ ಕಾಲೇಜಿನ ವಿಶೇಷವಾಗಿದೆ.
ಇಂದು ಈ ಕಾಲೇಜಿನಲ್ಲಿ ಓದಿರುವ ವಿದ್ಯಾರ್ಥಿಗಳು ಎಂ.ಬಿ.ಎ., ಎಂ.ಕಾಂ., ಎಲ್.ಎಲ್.ಬಿ., ಎಂ.ಎ., ಎಂ.ಇಡಿ., ಸಿ.ಎ ಮೊದಲಾದ ಕೋರ್ಸ್ಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಅಲ್ಲದೆ ಸರ್ಕಾರಿ ನೌಕರರಾಗಿಯೂ ಇದ್ದಾರೆ. ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಸಹ ಒಂದಾಗಿದೆ.
ವಿದ್ಯಾಸಂಸ್ಥೆಯು ಪ್ರಶಾಂತವಾದ ಓದುವ ವಾತಾವರಣವನ್ನು ಹೊಂದಿದೆ. 14 ನೆ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೋಳ್ಳುತ್ತಿರುವುದು ಪೋಷಕರ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಂಭ್ರಮಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








