ಬೆಂಗಳೂರು:
ಕಳೆದ 2 ದಿನಗಳ ಹಿಂದೆ ಕೆ.ಜಿ.ಗೆ 70 ರೂ ದಾಟಿದ್ದ ಟೊಮಟೊ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಎರಡು ದಿನಗಳ ಹಿಂದೆ ಕೆ.ಜಿ.ಗೆ 58ರಿಂದ 60 ಬೆಲೆ ಕುದುರಿಸಿಕೊಂಡಿದ್ದ ಟೊಮಟೊ ದರ 40ಕ್ಕೆ ಕುಸಿದಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 25ರಿಂದ 35 ರು. ನಿಗದಿಯಾಗಿದೆ.
ಚಳಿಯಿಂದಾಗಿ ಕೆಲ ತರಕಾರಿ ಹಾಗೂ ಟೊಮಟೊ ಇಳುವರಿ ಕುಂಠಿತವಾಗಿತ್ತು. ಇದರಿಂದ ಉತ್ತಮ ಧಾರಣೆಯೂ ಲಭ್ಯವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಎಲ್ಲೆಡೆ ದಾಖಲೆ ಪ್ರಮಾಣದ ಚಳಿ ಹಿನ್ನೆಲೆ ಟೊಮೆಟೋ ಕಾಯಿ ಕಟ್ಟದೇ ಇಳುವರಿ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿತ್ತು. ವಿವಿಧ ಮಾರುಕಟ್ಟೆಯಲ್ಲಿ ಗುಣಮಟ್ಟ ಆಧರಿಸಿ ಕೆ.ಜಿ.ಗೆ 30ರಿಂದ 70ರವರೆಗೆ ಮಾರಾಟಗೊಂಡಿತ್ತು.
ಉತ್ತಮ ದರ ವ್ಯಕ್ತವಾದ ಹಿನ್ನೆಲೆ ಮಾರುಕಟ್ಟೆಗೆ ರೈತರು ತರುವ ಟೊಮಟೊ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲ್ಲದೆ ನಾಸಿಕ್‌ನಿಂದಲೂ ಟೊಮಟೊ ಬರುತ್ತಿದೆ. ಪೂರೈಕೆ ಪ್ರಮಾಣ ಹೆಚ್ಚಾದಷ್ಟು ಬೇಡಿಕೆ ಕುಸಿಯಲಿದೆ ಎನ್ನುವಂತೆ ಇದೀಗ ಟೊಮ್ಯಾಟೋ ಬೆಲೆಯು ಗಣನೀಯವಾಗೇ ಇಳಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ