ಕನ್ಹಯ್ಯ ಕುಮಾರ್‌ ವಿರುದ್ಧ ದೋಷಾರೋಪ ಪಟ್ಟಿ

ನವದೆಹಲಿ

        ದೇಶ ವಿರೋಧಿ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ದಾಖಲಾಗಿದ್ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ ಸೇರಿದಂತೆ ಮೂವರು ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ದೆಹಲಿ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

        ಕನ್ಹಯ್ಯ ಕುಮಾರ್‌, ಅನಿರ್ಬನ್‌ ಭಟ್ಟಾಚಾರ್ಯ, ಸಯ್ಯದ್‌ ಉಮರ್‌ ಖಾಲಿದ್‌, ಕಾಶ್ಮೀರಿ ನಿವಾಸಿಗಳಾದ ಆಖಿಬ್‌ ಹುಸೈನ್‌, ಮುಜೀಬ್‌ ಹುಸೈನ್‌, ಮುನೀಬ್‌ ಹುಸೈನ್‌, ಉಮರ್‌ ಗುಲ್‌, ರಯೀಸ್‌ ರಸೂಲ್‌, ಬಶಾರತ್‌ ಅಲಿ ಮತ್ತು ಖಾಲಿದ್‌ ಬಶೀರ್‌ ಭಟ್‌ ವಿರುದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

       ಉಳಿದ ಆರೋಪಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪ್ರತಿಭಟನೆಯ ವೀಡಿಯೋ ಆಧರಿಸಿ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

       2016, ಫೆಬ್ರವರಿ 9ರಂದು ಜೆಎನ್ಯು ವಿದ್ಯಾರ್ಥಿಗಳು ಅಫ್ಝಲ್‌ ಗುರು ಮತ್ತು ಮಕ್ಬೂಲ್‌ ಭಟ್ಟ್‌ಗೆ ಮರಣದಂಡನೆ ವಿಧಿಸಿದ್ದರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ದೇಶ ವಿರೋಧಿ ಘೋಷಣೆ ಕೂಗಲಾಗಿತ್ತು. ಈ ಬಗ್ಗೆ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಮಾಡಲಾದ ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದು ನೈಜ ವೀಡಿಯೋ ಎಂದು ಪ್ರಯೋಗಾಲಯ ವರದಿ ನೀಡಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link