ಮಧುಗಿರಿ:
ಫೆ.8 ಮತ್ತು 9 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಮಠದಲ್ಲಿ ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು ಸೇರಿದಂತೆ ಸಮುದಾಯದ ಸಹಕಾರದಿಂದ ವಾಲ್ಮೀಕಿ ಜಾತ್ರೆ ಹಾಗೂ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಾಲ್ಮೀಕಿ ಸಂಸ್ಥಾನದ ಶ್ರೀ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು ತಿಳಿಸಿದರು.
ಪಟ್ಟಣದ ವಾಲ್ಮೀಕಿ ಬಡಾವಣೆಯಲ್ಲಿ ತಾಲ್ಲೂಕು ನಾಯಕ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಪ್ರಯುಕ್ತ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿ ವರ್ಷವು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ವರ್ಷಕ್ಕೆ ಒಬ್ಬರಂತೆ ಮಠದ ಸಂದೇಶಗಳನ್ನು ಪ್ರಚಾರ ಮಾಡುವಂತಹ ಒಬ್ಬ ಕ್ರಿಯಾಶೀಲ ಅಧ್ಯಕ್ಷರನ್ನು ಪ್ರತಿ ತಾಲ್ಲೂಕಿನಲ್ಲಿ ನೇಮಕ ಮಾಡಲಾಗುತ್ತಿದೆ.
ಸಮುದಾಯದವರನ್ನು ಒಗ್ಗೂಡಿಸಲು ರಾಜ್ಯದ 28 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದ್ದು, ದಾನಿಗಳಿಂದ ವಸ್ತು ಹಾಗೂ ಹಣದ ರೂಪದಲ್ಲಿ ದೇಣಿಗೆಯನ್ನು ಸಂಗ್ರಹಿಸಲಾಗುತ್ತಿದೆ. ಕಾರ್ಯಕ್ರಮವು ರಾಜ್ಯ ಮಟ್ಟದ್ದಾಗಿರುವುದರಿಂದ ನಾಡಿನಿಂದ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಆದ್ದರಿಂದ ಖರ್ಚು ವೆಚ್ಚಗಳು ಹೆಚ್ಚಾಗಿವೆ. ಸಮುದಾಯದ ಸಹಕಾರ ಅಗತ್ಯವಾಗಿದ್ದು, ಸಮುದಾಯವು ಆರ್ಥಿಕವಾಗಿ ಸಾಮಾಜಿಕವಾಗಿ ಆಧ್ಯಾತ್ಮಿಕವಾಗಿ ಮುಂದುವರೆಯುತ್ತಿದೆ ಎಂದರು.
2016ರಲ್ಲಿ ರಾಜ್ಯ ಸರಕಾರವು ಜಾತಿ ಗಣತಿಯನ್ನು ನಡೆಸಿದೆ, ಆದರೆ ಇದುವರೆಗೂ ರಾಜ್ಯಗಳಲ್ಲಿನ ಸಮುದಾಯಗಳ ಜನ ಸಂಖ್ಯೆ ಎಷ್ಟೆಂಬ ವಿಸ್ಕತ ವರದಿಯನ್ನು ಪ್ರಕಟಿಸಿಲ್ಲ. ಕೆಲ ಬಲಾಢ್ಯ ಸಮಾಜಗಳು ನಾವು ಬಹುಸಂಖ್ಯಾತರೆಂದು ಹೇಳಿಕೊಂಡಿದ್ದು, ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳು ಬಹುಸಂಖ್ಯಾತ ಹಾಗೂ ಬಲಾಡ್ಯರಾಗುತ್ತಾರೆಂಬ ಎಂಬ ಭಾವನೆಯಿಂದ ಕಳೆದ 70 ವರ್ಷಗಳಿಂದ ಸಂವಿಧಾನದಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳಿಂದ ವಂಚಿಸುತ್ತ ಸರಕಾರದ ಮೇಲೆ ಒತ್ತಡ ಹೇರಿ ಜಾತಿ ಗಣತಿಯ ವರದಿಯನ್ನು ಪ್ರಕಟಿಸದಿಲ್ಲದಿರುವುದು ವಿಷಾದನೀಯ ಎಂದರು.
ಸಂಘದ ಗೌರವಾಧ್ಯಕ್ಷ ಎಂ.ಆರ್.ರಂಗಶ್ಯಾಮಯ್ಯ, ತಾಲ್ಲೂಕು ಅಧ್ಯಕ್ಷ ಜಿ.ಸಿದ್ದಗಂಗಪ್ಪ, ಪದಾಧಿಕಾರಿಗಳಾದ ದೊಡ್ಡಯ್ಯ, ಹನುಮಂತರಾಯಪ್ಪ, ಲಿಂಗಪ್ಪ, ರಂಗಪ್ಪ, ಬಾಲರಾಜು, ರಾಯಣ್ಣ, ಬಿ.ಪಿ.ನಾಗರಾಜು, ಪ್ರವೀಣ್ ಕುಮಾರ್, ಸೂರ್ಯನಾರಾಯಣ್, ಮಿಲ್ ರಾಜಣ್ಣ, ರಂಗನಾಯಕ, ಗರಣಿ ಗಿರೀಶ್, ಚಿರಂಜೀವಿ, ಚಂದನ್, ಲೋಕೇಶ್, ದೇವರಾಜು ಚಂದ್ರಮ್ಮ, ಶೋಭಕುಮಾರಿ, ಸುಮಾ, ಜಯಮ್ಮ, ಎಂ.ಶಂಕರನಾರಾಯಣ ಬಾಬು, ಜಗದೀಶ್ ಕುಮಾರ್ ಮತ್ತಿತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ