ಮಿಡಿಗೇಶಿ
ಕೆ.ಶಿಫ್. ಇಲಾಖೆಯಿಂದ ಅರ್ಹ ಫಲಾನುಭವಿಗೆ ಸಿಗಬೇಕಾದ ಪರಿಹಾರದ ಹಣ ಮತ್ಯಾರಿಗೋ ನೀಡಿ ಕೈತೊಳೆದುಕೊಂಡ ಆರೋಪ
ಆ 12 ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಆಂದ್ರರಾಜ್ಯದ ರಾಯದುರ್ಗವರೆಗಿನ 193ಕಿಲೋಮೀಟರ್ ಉದ್ದದ 576 ಕೋಟಿ ರೂಪಾಯಿಗಳಿಂದ ರಾಜ್ಯದ ಹೆದ್ದಾರಿ ರಸ್ತೆಯನ್ನು ಕೆ.ಶಿಫ್. ಇಲಾಖೆವತಿಯಿಂದ ನಿರ್ಮಿsಸಿದ್ದು ಸದರಿ ರಸ್ತೆಯ ಶಂಕುಸ್ಥಾಪನೆ ಹಾಗೂ ಉದ್ಫಾಟನೆಯನ್ನು ಅಂದಿನ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಅಂದಿನ ಮಧುಗಿರಿ ವಿಧಾನ ಸಭಾ ಸದಸ್ಯರಾದ ಕೆ.ಎನ್. ರಾಜಣ್ಣನವರು ಸೇರಿಕೊಂಡು ರಾಜ್ಯದ ಹೆದ್ದಾರಿ ರಸ್ತೆಯನ್ನು ಲೋಕಾರ್ಪಣೆ ಮಾಡಿಸಿದ್ದರು.
ಸದರಿ ಹೆದ್ದಾರಿ ರಸ್ತೆಯ ಅಕ್ಕ-ಪಕ್ಕದಲ್ಲಿನ ಕೆಲವು ಮನೆಗಳು, ರಸ್ತೆಬದಿಯ ಅಂಗಡಿ,ಪೆಟ್ಟಿಗೆ ಅಂಗಡಿಗಳ ತೆರುವು ಕಾರ್ಯಾಚರಣೆಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೆರಡು ಕೆ.ಶಿಫ್. ಇಲಾಖೆಯ ಮೂಲಕ ಪರಿಹಾರ ನೀಡುತ್ತಿರುವುದು ಶ್ಲಾಘನೀಯವಾದುದ್ದೇದೆ ಆಗಿರುತ್ತದೆಯಾದರೂ ಸಹ ಸದರಿ ಇಲಾಖೆಯ ಇಂಜಿನಿಯರ್ಗಳವರಿಂದಲೋ ಅಥವಾ ಸದರಿಯವ ಹಿಂಬಾಲಕರರಿಂದಲೋ ಅಥವಾ ಸದರಿ ಕೆ.ಶಿಫ್. ಇಲಾಖೆಯ ವಾಹನ ಚಾಲಕಲರ ಕೈಚಳಕ, ಚಾಣಾಕ್ಷತೆಯಿಂದಲೋ ಒಟ್ಟಾರೆ ಪೆಟ್ಟಿಗೆ ಅಂಗಡಿಯಿಟ್ಟುಕೊಂಡು ವ್ಯಾಪಾರ ಮಾಡುವವರು
ತಮ್ಮ ಪೆಟ್ಟಿಗೆ ಅಂಗಡಿಯನ್ನು ಸ್ವಲ್ಪಮಟ್ಟಿಗೆ ದೂರಸರಿಸುವುದಕ್ಕಾಗಿ ಪರಿಹಾರವನ್ನು ನೀಡುತ್ತಿದ್ದು ಸದರಿ ಪರಿಹಾವನ್ನು ಪಡೆಯಬೇಕಾಗಿದ್ದಂತಹ ಅರ್ಹ ಫಲಾನುಭವಿಯ ಬದಲಿಗೆ ಜೀಪಿನ ಚಾಲಕನ ಸಂಭಧಿಕರವರೇ ಕೆ.ಶಿಫ್. ಇಲಾಖೆಗೆ ಪರಿಹಾರ ಧನ ಪಡೆಯಬೇಕಾದಂತಹ ದಾಖಲಾತಿಗಳನ್ನು ಸದರಿ ಪೆಟ್ಟಿಗೆ ಅಂಗಡಿ ಮಾಲೀಕರಿಗೆ ತಿಳಿಯದ ರೀತಿಯಲ್ಲಿ ಪರಿಹಾರವನ್ನು ಪಡೆದಿರುವ ಅದರಲ್ಲೂ ಎರಡು ಕಂತುಗಳಲ್ಲಿ ಪರಿಹಾರದ ಹಣವನ್ನು ಚಕ್ಮೂಲಕ ಡ್ರಾಮಾಡಿ ಕೊಂಡಿರುವ ಪ್ರಕರಣಗಳು ಅಲ್ಲಲ್ಲಿ ಕಂಡು ಬಂದಿದ್ದು ಮೈಸೊರು ಜಿಲ್ಲೆ, ಮಂಡ್ಯ ಜಿಲ್ಲೆ, ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ಹಾಗೂ ಮಧುಗಿರಿ ತಾಲ್ಲೂಕುಗಳಲ್ಲಿ ನಡೆದಿರುವ ಬಗ್ಗೆ ಕೆ.ಶಿಫ್. ಇಲಾಖೆಗೆ ಅನೇಕ ದೂರುಗಳು ಬಂದಿದ್ದು ಸದರಿದೂರಿನನ್ವಯ ಇಲಾಖೆಯ ಅರ್ಹ ಪಲಾನುಭವಿಗಳಿಗ ಪರಿಹಾರ ಸಿಕ್ಕಿದೆಯೇ ಅಥವಾ ಅನ್ಯಾಯವಾಗಿ ಬೇರೆಯವರು ಸದರಿ ಹಣವನ್ನು ಇಲಾಖೆಗೆ ತಪ್ಪುಮ ಮಾಹಿತಿ, ನೀಡಿಹಣ ತೆಗೆದುಕೊಂಡಿದ್ದಾರೆಯೇ ಎಂಬುದರ ಬಗ್ಗ್ಗೆ ಸ್ಥಳಕ್ಕೆ ಬಂದಾಗ ಇಂತಹ ಪ್ರಕರಣಗಳು ಬಯಲಿಗೆ ಬಂದಿರುತ್ತವೆ.
ಪತ್ರಿಕೆಗೆ ದೊರೆತಿರುವ ಮಾಹಿತಿಯಲ್ಲಿ 29 ಜನರಿ ಜನರಿಗೆ ಪರಿಹಾರ ನೀಡಿರುವ ದಾಖಲಾತಿ ದೊರೆತಿದ್ದು 28 ಜನಫಲಾನುಭವಿಗಳು ಪಾವಗಡ ತಾಲ್ಲೂಕಿನವರಾಗಿರುತ್ತಾರೆ. ಓರ್ವ ವಿಧವಾ ಮಹಿಳೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಹೊಸಕೆರೆ ಗ್ರಾಮ ಪಂಚಾಯಿತಿಗೆ ಸೇರಿದ ಹೆಚ್.ಬಸವನಹಳ್ಳಿ ಗೇಟ್ ಬಳಿಯ ತಂಗುದಾಣದ ಬಳಿಯಲ್ಲಿರು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಮಹಿಳೆಯಾಗಿರುತ್ತಾಳೆ.
ಸದರಿ ಮಹಿಳೆ ಲಕ್ಷಮ್ಮ w/o ಲೇ. ಹನುಮಂತರಾಯಪ್ಪ ರವರಬದಲಿಗೆ ಹೆಚ್. ಬಸವನಹಳ್ಳಿ ಗ್ರಾಮದ ರಂಗಧಾಮಯ್ಯ s/o ಪುಟ್ಟರಂಗಪ್ಪ ಎನ್ನುವವರು ಎರಡು ಬಾರಿಯಿಂದ ಒಟ್ಟು 66550-00ರೂ ತಾ18-09-2014 ಹಾಗೂ ತಾ.13-01-2015 ರಂದು ಹಣವನ್ನು ಡ್ರಾಮಾಡಿಕೊಂಡಿರುವ ಬಗ್ಗೆ ದಾಖಲೆ ದೊರೆತಿರುತ್ತವೆ [ Wap 1/64 G-L-S. 258] ಸದರಿ ರಂಗಧಾಮಯ್ಯ ಪೆಟ್ಟಿಗೆ ಅಂಗಡಿಯನ್ನು ಈವತ್ತಿನವರೆವಿಗೂ ಸದರಿ ಜಾಗದಲ್ಲಿ ಇಟ್ಟಿರುವುದಿಲ್ಲವಾಗಿರುತ್ತಾನೆ, ಈಗ ಲಕ್ಷಮ್ಮ ಎಂಬ ಮಹಿಳೆ ತನಗೆ ಸಿಗಬೇಕಾದ ಪರಿಹಾರ ಬೇರೆಯವರು ಡ್ರಾ ಮಾಡಿಕೊಂಡಿರುವ ಬಗ್ಗೆ ಎಚ್ಚೆತ್ತುಕೊಂಡು ತಾ 12-1-2019 ರಂದು ಮಿಡಿಗೇಶಿ ಪೋಲಿಸ್ ಠಾಣೆಗೆ ಲಿಖಿತ ದೂರನ್ನು ನೀಡಿರುವುದಾಗಿ ಪತ್ರಿಕೆಗೆ ತಿಳಿಸಿರುತ್ತಾಳೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ