ಚಳ್ಳಕೆರೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ತಾಲ್ಲೂಕು ಮಟ್ಟದ ವಿವಿಧ ಮೋರ್ಚಾಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ತಾಲ್ಲೂಕಿನ ಸ್ಲಂ ಮೋರ್ಚಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ತಿಳಿಸಿದರು.
ಅವರು, ಬುಧವಾರ ಪಕ್ಷದ ಕಾರ್ಯಾಲಯದಲ್ಲಿ ತಾಲ್ಲೂಕಿನ ಸ್ಲಂ ಮೋರ್ಚಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಸ್ಲಂ ಮೋರ್ಚಾ ಪದಾಧಿಕಾರಿಗಳ ಘಟಕಕ್ಕೆ ಲೋಕಸಭಾ ಚುನಾವಣೆಗೆ ಕೊಳಚೆ ಪ್ರದೇಶ ನಿವಾಸಿಗಳ ಸಂಘಟನೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಸ್ಲಂ ಮೋರ್ಚಾ ಅಧ್ಯಕ್ಷ ಭೀಮರಾಜ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ವಿವಿಧ ತಾಲ್ಲೂಕು ಘಟಕಗಳಲ್ಲಿ ಸ್ಲಂ ಮೋರ್ಚಾ ಘಟಕವನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಚುನಾವಣೆಯಲ್ಲೂ ಕೊಳಚೆ ಪ್ರದೇಶ ನಿವಾಸಿಗಳ ಕಡುಬಡವರ ಮತಗಳನ್ನು ಪಡೆಯುವ ಪಕ್ಷಗಳು ಅವರುಗಳಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ನಿರ್ಲಕ್ಷ್ಯೆ ವಹಿಸುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಘಟಕದ ರಾಜ್ಯಾಧ್ಯಕ್ಷ ಸಿ.ಟಿ.ರವಿ ಮಾರ್ಗದರ್ಶನದಲ್ಲಿ ಸ್ಲಂ ಮೋರ್ಚಾವನ್ನು ಬಲಪಡಿಸಲಾಗುತ್ತಿದೆ ಎಂದರು.
ತಾಲ್ಲೂಕು ಸ್ಲಂ ಮೋರ್ಚಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹುಲಿಗಪ್ಪ ಮಾತನಾಡಿ, ಈಗಾಗಲೇ ಭಾರತೀಯ ಜನತಾ ಪಕ್ಷದ ವಿವಿಧ ಘಟಕಗಳು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿದ್ದು, ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸ್ಲಂ ಮೋರ್ಚಾ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಚಳ್ಳಕೆರೆ ನಗರದ ಜನತಾ ಕಾಲೋನಿ, ಅಂಬೇಡ್ಕರ್ ನಗರ, ಗಾಂಧಿನಗರ, ರಹೀಂನಗರ, ವೆಂಕಟೇಶ್ವರನಗರ, ಡಿ.ಸುಧಾಕರ ನಗರ ಮುಂತಾದ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯ ಕೊಳಚೆ ಪ್ರದೇಶದವಿದ್ದು ಎಲ್ಲರನ್ನೂ ಭೇಟಿ ಮಾಡಿ ಸಂಘಟನೆಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು.
ಘಟಕದ ಉಪಾಧ್ಯಕ್ಷರಾಗಿ ತರಕಾರಿ ಓಬಣ್ಣ, ಪ್ರಧಾನ ಕಾರ್ಯದರ್ಶಿಗಳಾಗಿ ಈಶ್ವರನಾಯಕ, ಬಿ.ಮೋಹನಚಾರ್, ಕಾರ್ಯದರ್ಶಿಗಳಾಗಿ ಜಿ.ತಿಪ್ಪೇಸ್ವಾಮಿ, ರುದ್ರೇಶ್ಯಾದವ್, ನಿರ್ದೇಶಕರಾಗಿ ಟಿ.ಸುರೇಶ್, ಬಿ.ಶ್ರೀನಿವಾಸ್, ಲೋಕೇಶ್, ಟಿ.ಎಸ್.ವೆಂಕಟೇಶ್, ಕೆ.ಎಸ್.ಗೋವಿಂದರಾಜು, ಚಂದ್ರಣ್ಣ ಮುಂತಾದವರು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮೂಡಲಗಿರಿಯಪ್ಪ, ಜಿಲ್ಲಾ ಮುಖಂಡರಾದ ಗಂಗಾಧರಪ್ಪ, ತಿಮ್ಮಣ್ಣ, ಚಂದ್ರಣ್ಣ, ಜಿಲ್ಲಾ ಉಪಾಧ್ಯಕ್ಷ ಬಿ.ಆರ್.ನಾಗರಾಜು, ಪಕ್ಷದ ಮುಖಂಡರಾದ ಬೋರನಾಯಕ, ಯುವ ಘಟಕದ ಅಧ್ಯಕ್ಷ ಆರ್.ನಾಗೇಶ್ನಾಯಕ ಮುಂತಾದವರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ