ಶ್ರೀಗಳು ತಮ್ಮ ಮರಣವನ್ನು ತಾವೇ ನಿರ್ಧರಿಸುತ್ತಾರೆ

ತುಮಕೂರು:

      ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿರುವ “ಸಿದ್ಧಗಂಗಾ ಶ್ರೀಗಳು ಇಚ್ಚಾಮರಣಿಯಾಗಿದ್ದು, ತಮ್ಮ ಮರಣವನ್ನು ತಾವೇ ನಿರ್ಧರಿಸುತ್ತಾರೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

      ಅವರು ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಆಗಮಿಸಿ, ಶ್ರೀಗಳ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಶ್ರೀಗಳು ಇಚ್ಛಾ ಮರಣಿ ಭಗವಂತ ಸೂಚನೆ ನೀಡಿದಾಗ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. 

ಇಂದು ಸಂಜೆ ತುಮಕೂರಿಗೆ ಬಿ.ಎಸ್.ವೈ..!?

      ಶ್ರೀಗಳಿಗೆ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆಯನ್ನು ಮಠದಲ್ಲೇ ನೀಡಲಾಗುತ್ತಿದೆ. ಕಿರಿಯ ಶ್ರೀಗಳು ಹಿರಿಯ ಶ್ರೀಗಳ ಆರೋಗ್ಯ ಏರುಪೇರಿನಿಂದಾಗಿ ಬಹಳಷ್ಟು ನೊಂದುಕೊಂಡಿದ್ದಾರೆ. ಅವರನ್ನು ನಾವು ಸಮಾಧಾನಪಡಿಸುತ್ತೇವೆ. ಇಂದು ಸಂಜೆಯವರೆಗೂ ನಾವು ಮಠದಲ್ಲಿ ಇರಲಿದ್ದೇವೆ. ಸುತ್ತೂರು ಶ್ರೀಗಳು ಸಂಜೆ ಬರಲಿದ್ದು, ಅವರೊಟ್ಟಿಗೆ ಮುಂದಿನ ಚಿಕಿತ್ಸೆಯ ಕುರಿತು ಚರ್ಚೆ ನಡೆಸುತ್ತೇವೆ. ಎಂದು ಬಿ.ಎಸ್.ವೈ ತಿಳಿಸಿದ್ದಾರೆ.

      ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಬಿ.ವೈ.ವಿಜಯೇಂದ್ರ ಕೂಡಾ ಬಿಎಸ್​ವೈ ಜೊತೆ ತೆರಳಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link