ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು

ಚಿತ್ರದುರ್ಗ:

    ಗ್ರಾಮೀಣ ಪ್ರದೇಶಗಳಲ್ಲಿ ಹುಟ್ಟಿಕೊಂಡಿರುವ ಜಾನಪದ ಕೂಡ ಸಂಗೀತದ ಮೂಲವಾಗಿರುವುದರಿಂದ ನಾನು ಕೂಡ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ನೆರವಾಯಿತು ಎಂದು ಅಸ್ಟೆಂಟ್ ಗೌರ್ವನರ್ ಝೋನ್ 7, ಆರ್.ಐ.ಡಿ.3160 ರೊ.ಡಾ.ಸಿ.ತಿಪ್ಪೇಸ್ವಾಮಿ ಹೇಳಿದರು.

     ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್, ಬ್ರಾಹ್ಮಣ ಸಂಘ, ಆಕಾಶವಾಣಿ, ಪತಂಜಲಿ ಸಾಂಸ್ಕತಿಕ ಅಕಾಡೆಮಿ ಇವರುಗಳ ಸಹಯೋಗದೊಂದಿಗೆ ಬ್ರಾಹ್ಮಣ ಸಂಘದ ಶತಮಾನೋತ್ಸವ ಹಾಗೂ ರಾಗಸುಧಾರಸ ದಶಮಾನೋತ್ಸವ ಅಂಗವಾಗಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಿಂದ ಆರಂಭಗೊಂಡ ರಾಗ ಸುಧಾರಸ ಸಂಗೀತ ಸಾಂಸ್ಕತಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

       ಸತತವಾಗಿ ಹತ್ತು ವರ್ಷಗಳಿಂದಲೂ ರಾಗಸುಧಾರಸ ಕಾರ್ಯಕ್ರಮದ ಮೂಲಕ ನಾಡಿನ ಸುಪ್ರಸಿದ್ದ ವಿದ್ವಾನ್‍ಗಳನ್ನು ಕರೆಸಿ ಜನತೆಗೆ ಸಂಗೀತದ ರಸದೌತಣ ಉಣಬಡಿಸುತ್ತಿರುವುದು ದೊಡ್ಡ ಸಾಧನೆ. ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಸಂಗೀತವನ್ನು ಕೇಳುವವರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಂಗೀತಕ್ಕಿರುವ ಮೌಲ್ಯ ಮಾತ್ರ ಕುಸಿದಿಲ್ಲದಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ರೊ.ಜೆ.ವಿ.ಮಂಜುನಾಥ್ ಮಾತನಾಡುತ್ತ ಸಂಗೀತಕ್ಕೆ ಔಷಧೀಯ ಗುಣವಿರುವುದರಿಂದ ಸಂಗೀತವನ್ನು ಕೇಳುವುದರಿಂದ ಅನೇಕ ಕಾಯಿಲೆಗಳು ಗುಣವಾಗುತ್ತದೆ ಎನ್ನುವ ನಂಬಿಕೆ ಈಗಲೂ ಸಂಗೀತಾಸಕ್ತರಲ್ಲಿ ಉಳಿದುಕೊಂಡಿದೆ. ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಾದ ರಾಗಗಳ ಜೋಡಣೆಯಿಂದ ಸಂಗೀತ ಸೃಷ್ಟಿಯಾಗಿದೆ. ಕಲೆ, ಸಾಹಿತ್ಯ, ಸಂಗೀತದಲ್ಲಿ ಆಸಕ್ತಿಯಿಲ್ಲದವರು ಪ್ರಾಣಿಗಿಂತಲೂ ಕಡೆ ಎಂದು ಹೇಳಿದರು.

      ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ಎಂ.ಜಿ.ವೇದಮೂರ್ತಿ, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ರೇಖಾಸಂತೋಷ್, ಪದ್ಮಶ್ರಿ ವಿದ್ವಾನ್ ಡಾ.ಆರ್.ಎನ್.ತ್ಯಾಗರಾಜನ್, ಪದ್ಮಶ್ರಿ ವಿದ್ವಾನ್ ಡಾ.ಆರ್.ಎನ್.ತಾರಾನಾಥನ್ ಇವರುಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಶೀಲಾಮಂಜುನಾಥ್, ಇನ್ನಿತರರು ಉಪಸ್ಥಿತರಿದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap