ಪ್ರಯಾಗ್ ರಾಜ್:
ನಮ್ಮ ದೇಶದಲ್ಲಿ ಸಾಧು ಸಂತರಿಗೆ ವಿಶೇಷ ಸ್ಥಾನಮಾನವಿದೆ ಅದರಲ್ಲಿಯೂ ನಾಗಾಸಾಧುಗಳ ಬಳಿ ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು ಅವರ ಬಳಿ ಕೇಳಬಾರದ ಪ್ರಶ್ನೆಗಳನ್ನು ಕೇಳಿದರೆ ತಕ್ಕ ಉತ್ತರ ನೀಡುತ್ತಾರೆ ಎಂದು ಮತ್ತೊಮ್ಮೆ ಸಾಬೀತಾಗಿದೆ.
ಇದರ ಕೊಂಚವೂ ಅರಿವಿಲ್ಲದ ಪತ್ರಕರ್ತೆ ಸಾಮಾನ್ಯರಿಗೆ ಪ್ರಶ್ನೆ ಕೇಳುವ ರೀತಿಯಲ್ಲಿ ಒಬ್ಬ ನಾಗಾಸಾಧುವಿಗೂ ಕೇಳಿದಾಗ ಆ ಸಾಧು ಪ್ರಶ್ನೆಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಸಾಮಾನ್ಯವಾಗಿ ನಾಗಾ ಸಾಧುಗಳು ಯಾವುದೇ ವಸ್ತ್ರ ಧರಿಸುವುದಿಲ್ಲ, ಕೇವಲ ಭಸ್ಮ ಧಾರಣೆ ಮಾಡಿಕೊಳ್ಳುತ್ತಾರೆ. ಆದರೆ ಕುಂಭಮೇಳಕ್ಕೆ ಆಗಮಿಸಿದ್ದ ನಾಗಾಸಾಧು ಒಬ್ಬರು ವಸ್ತ್ರ ಧರಿಸಿ ನಡೆಯುತ್ತಿದ್ದರು. ಈ ವೇಳೆ ಎದುರಾದ ಪತ್ರಕರ್ತೆಯೊಬ್ಬರು ನಾಗಾಸಾಧುವನ್ನು ಸಂದರ್ಶಿಸಲು ಯತ್ನಿಸಿದರು. ಆದರೆ ಅದೇ ಸಮಯದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ನಾಗಾಸಾಧುವನ್ನು ಬಟ್ಟೆ ಧರಿಸಿಕೊಂಡಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ.
“ನಿಮ್ಮದು 12 ವರ್ಷಗಳ ಸಂಕಲ್ಪ ಎನ್ನುತ್ತೀರಿ, ಆದರೆ ಕೆಲವು ಸಾಧುಗಳು ಬಟ್ಟೆ ಧರಿಸುವುದಿಲ್ಲ. ಆದರೆ ನೀವು ಬಟ್ಟೆ ಧರಿಸಿದ್ದೀರಿ ಎಂದು ಹೇಳಿ ಮುಗಿಸುವ ಮುನ್ನವೇ ನಾಗಾಸಾಧು ಧರಿಸಿದ್ದ ವಸ್ತ್ರವನ್ನು ಕಳಚಿದ್ದಾರೆ.ಇದನ್ನು ಗಮನಿಸಿದ ಪತ್ರಕರ್ತೆ ನಾಗಾಸಾಧು ನೀಡಿದ ಪ್ರತಿಕ್ರಿಯೆ ಕಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದು ಬಂದಿದೆ.