ಬೆಂಗಳೂರು
ಆಪರೇಷನ್ ಕಮಲ ಭೀತಿಯಿಂದ ಬಿಡದಿ ಖಾಸಗಿ ರೆಸಾರ್ಟ್ ಸೇರಿದ್ದ ಕಾಂಗ್ರೆಸ್ ಶಾಸಕರ ಗಲಾಟೆ ಪ್ರಕರಣದಲ್ಲಿ ಹಲ್ಲೆಯಿಂದಾಗಿ ಶಾಸಕ ಆನಂದ್ ಸಿಂಗ್ ಅವರಿಗೆ ಗಂಭೀರ ಪೆಟ್ಟಾಗಿರುವುದನ್ನು ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
ಕಣ್ಣು, ತಲೆ ಹಾಗೂ ಹೊಟ್ಟೆ ಭಾಗಕ್ಕೆ ಹೆಚ್ಚಿನ ಪೆಟ್ಟು ಬಿದ್ದಿರುವ ಹಿನ್ನಲೆಯಲ್ಲಿ ವೈದ್ಯರು ಇಸಿಜಿ ಹಾಗು ಸ್ಕ್ಯಾನಿಂಗ್ ಮಾಡಿದ್ದಾರೆ. ತಜ್ಞ ವೈದ್ಯರ ನೇತೃತ್ವದಲ್ಲಿ ಚಿಕಿತ್ಸೆ ಮುಂದುವರೆದಿದೆ.ಆನಂದ್ ಸಿಂಗ್ ಆರೋಗ್ಯ ಸ್ಥಿರವಾಗಿದ್ದು ಕಣ್ಣು ,ಹೊಟ್ಟೆ ನೋವು ಕಡಿಮೆಯಾಗಲು ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.ಇದೇ ವೇಳೆ ಸ್ಕ್ಯಾನಿಂಗ್ ವರದಿ ಬಳಿಕ ಪೆಟ್ಟಿನ ತೀವ್ರತೆ ತಿಳಿಯಲಿದೆ ಎಂದಿದ್ದಾರೆ.24 ಗಂಟೆಗಳ ನಿಗಾವಹಿಸಲು ಸೂಚಿಸಿದ್ದು ನಾಳೆ ಆನಂದ್ ಸಿಂಗ್ ಅವರನ್ನು ಬಿಡುಗಡೆ ಮಾಡಬೇಕೆ ಅಥವಾ ಚಿಕಿತ್ಸೆ ಮುಂದುವರೆಸಬೇಕೆ ಎಂಬುದನ್ನು ನಿರ್ಧರಿಸಲಾಗುವುದು ಎಂದಿದ್ದಾರೆ.ಆಸ್ಪತ್ರೆಗೆ ಭೇಟಿ ನೀಡಿರುವ ಆನಂದ್ ಸಿಂಗ್ ತಂದೆ ಹಾಗೂ ಕುಟುಂಬ ಸದಸ್ಯರ ಜೊತೆ ಮಾತನಾಡಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/vbk-15-Anand-Singh.gif)