ಬೆಂಗಳೂರು:
ಶತಾಯುಷಿ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ನೆನ್ನೆ(ಭಾನುವಾರ)ಯಿಂದ ಏರುಪೇರಾದ ಹಿನ್ನೆಲೆಯಲ್ಲಿ ಶ್ರೀಗಳನ್ನು ಕಾಣಲು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ತಮ್ಮ ಇತರೆ ಕೆಲಸಗಳನ್ನು ಬಿಟ್ಟು ತುಮಕೂರಿಗೆ ತೆರಳುತ್ತಿದ್ದಾರೆ.
ಇಂದು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬರ ಅಧ್ಯಯನ ಕೈಗೊಳ್ಳಲಿದ್ದರು. ನಾಳೆ ಚಾಮರಾಜನಗರದಲ್ಲಿ ಬರ ಅಧ್ಯಯನ ನಡೆಯುವುದಿತ್ತು. ಆದರೆ, “ಶ್ರೀಗಳ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಬಂದಿದೆ. ಹಾಗಾಗಿ ನಾನು ತುಮಕೂರಿಗೆ ಹೊರಡುತ್ತಿದ್ದೇನೆ. ಎಂದು ಬಿಎಸ್ ವೈ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ