ಗಣರಾಜ್ಯೋತ್ಸವ ದಿನಾಚರಣೆಗೆ ಭರದ ಸಿದ್ದತೆ

ಬೆಂಗಳೂರು

        ಬರುವ ಶನಿವಾರ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಕವಾಯತು ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಗೆ ಭರದ ಸಿದ್ದತೆಗಳು ನಡೆದಿವೆ.

        ದಿನಾಚರಣೆಯಲ್ಲಿ 2 ಸಾವಿರಕ್ಕೂ ಹೆಚ್ಚು ಮಕ್ಕಳು ನಾಡಿನ ಕಲೆ, ಸಾಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಪಥ ಸಂಚಲನದಲ್ಲಿ ಸ್ಕೌಟ್ಸ್, ಗೈಡ್ಸ್, ಎನ್‍ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಶಾಲಾ ಮಕ್ಕಳು ಒಳಗೊಂಡಂತೆ ಕವಾಯತು ಮತ್ತು ಬ್ಯಾಂಡ್‍ನ 38 ತುಕಡಿಗಳಲ್ಲಿ ಸುಮಾರು 1520 ಮಂದಿ ಶಾಲಾ ಮಕ್ಕಳು ಭಾಗವಹಿಸಲಿದ್ದಾರೆ.

      ಖ್ಯಾತ ಹಿನ್ನಲೆ ಗಾಯಕಿ ಬಿ.ಆರ್ ಛಾಯಾ ಅವರ ತಂಡದಿಂದ ನಾಡಗೀತೆ ಹಾಗೂ ರೈತ ಗೀತೆ ಗಾಯನವಿರುವುದು ವಿಶೇಷವಾಗಿದೆಎಂದು ಪತ್ರಕಾಗೋಷ್ಠಿಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ತಿಳಿಸಿದರು.

       ಜಿ.ಎಸ್ ಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಎಲೆಕ್ಟ್ರಾನಿಕ್ ಸಿಟಿ, ಶಂಶ್ ಪ್ರೌಢಶಾಲೆ ಕೋನಪ್ಪನ ಅಗ್ರಹಾರ ಶಾಲೆಯ ಒಟ್ಟು 800 ಮಕ್ಕಳು `ನಮ್ಮ ಭಾರತ ಭವ್ಯ ಭಾರತ’, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಜನಾಪುರ ಮತ್ತು ನವಭಾರತ ನಿರ್ಮಾಣ ವಿದ್ಯಾಮಂದಿರ, ನೇಕಾರ ಕಾಲೋನಿ ಒಟ್ಟು 700 ಮಕ್ಕಳಿಂದ ಕಾರ್ಗಿಲ್ ಕಥನ, ನಾಗಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ದೊಡ್ಡ ಬಿದರಕಲ್ಲು ವಿದ್ಯಾಕೇಂದ್ರದ 650 ಮಕ್ಕಳಿಂದ ರಾಷ್ಟ್ರೀಯ ಭಾವೈಕ್ಯತೆ, ಎಎಸ್‍ಸಿ ಕೇಂದ್ರ ಮತ್ತು ಕಾಲೇಜು ತಂಡದವರಿಂದ `ಮ್ಯೂಲ್ ಟ್ರಿಕ್ ರೈಡಿಂಗ್ ಟೀಮ್’, ಪ್ಯಾರಾ (ಎಸ್‍ಎಫ್) ತಂಡದಿಂದ `ರೂಮ್ ಇಂಟರ ವೆನ್ಷನ್’ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು 2300 ಮಕ್ಕಳು 3 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಗಣರಾಜ್ಯೋತ್ಸವದ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 845ಕ್ಕೆ ರಾಜ್ಯಪಾಲರಾದ ವಜುಭಾಯಿ ರೂಢಾವಾಲಾ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪರೇಡ್‍ನ್ನು ವೀಕ್ಷಿಸಿ ಪಥ ಸಂಚಲನದ ಗೌರವ ಸ್ವೀಕರಿಸಿದ ಬಳಿಕ ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ.

       ಗಣರಾಜ್ಯೋತ್ಸವ ನಡೆಯುವ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮೈದಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆ ಮತ್ತು ಸುರಕ್ಷತೆಗಾಗಿ 50 ಸಿಸಿ ಕ್ಯಾಮರಾಗಳು, ನಿಯಂತ್ರಣಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

       ಅತಿ ಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು, ಸ್ವಾತಂತ್ರ ಹೋರಾಟಗಾರರು, ಸಾರ್ವಜನಿಕರಿಗಾಗಿ ತಲಾ 2 ಸಾವಿರ ಆಸನಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್, ನಗರ ಜಿಲ್ಲಾಧಿಕಾರಿ ವಿಜಯಶಂಕರ್ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link