ಬೆಂಗಳೂರು:
ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನಾಲ್ವರು ಅಧಿಕಾರಿಗಳಲ್ಲಿ ಕೆಲವರಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು, ಹುಬ್ಬಳ್ಳಿ- ಧಾರವಾಡ ನಗರ ಪೊಲೀಸ್ ಆಯುಕ್ತರಾಗಿ ಬಿ.ಎಸ್.ಲೋಕೇಶ್ ರನ್ನು ನೇಮಕ ಮಾಡಲಾಗಿದೆ. ಅಂತೆಯೇ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಕೆ.ಟಿ.ಬಾಲಕೃಷ್ಣ ಅವರನ್ನು ನೇಮಕ ಮಾಡಲಾಗಿದೆ.
ಇನ್ನು ಕೆಜಿಎಫ್ ಎಸ್ಪಿ ಆಗಿದ್ದ ಬಿ.ಎಸ್.ಲೋಕೇಶ್ ಅವರಿಗೆ ಡಿಐಜಿ ಆಗಿ ಬಡ್ತಿ ನೀಡಲಾಗಿದೆ. ಅಂತೆಯೇ ಗುಪ್ತಚರ ಇಲಾಖೆ ಎಸ್ಪಿ ಆಗಿದ್ದ ಕೆ.ಟಿ.ಬಾಲಕೃಷ್ಣ ಡಿಐಜಿ ಆಗಿ ಬಡ್ತಿ ನೀಡಲಾಗಿದೆ. ಬೆಳಗಾವಿ ನಗರದ ಪೊಲೀಸ್ ಆಯುಕ್ತರಾಗಿ ಪಿ.ರಾಜೇಂದ್ರ ಪ್ರಸಾದ್ ನೇಮಕ ಮಾಡಲಾಗಿದೆ , ಬೆಂಗಳೂರಿನಲ್ಲಿ ವೈರ್ಲೆಸ್ ವಿಭಾಗದ ಎಸ್ಪಿ ಆಗಿದ್ದ ರಾಜೇಂದ್ರ ಪ್ರಸಾದ್ ಡಿಐಜಿ ಆಗಿ ಬಡ್ತಿ ನೀಡಲಾಗಿದೆ. ಯೋಜನೆ ಹಾಗು ಆಧುನಿಕರಣ ವಿಭಾಗದ ಡಿಐಜಿಯಾಗಿ ಆರ್.ರಮೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.