ನಿರ್ಮಿತಿ ಕೇಂದ್ರದ ಕಾಮಗಾರಿಗಳು ತೀರಾ ಕಳಪೆ : ಶಾಸಕಿ ಪೂರ್ಣಿಮಾಶ್ರೀನಿವಾಸ್

ಹಿರಿಯೂರು :

         ತಾಲ್ಲೂಕಿನಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸುತ್ತಿರುವ ಕಾಮಗಾರಿಗಳು ತೀರಾ ಕಳಪೆಯಾಗಿದ್ದು, ಈ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿದೆ. ಅಲ್ಲದೆ ಅಧಿಕಾರಿಗಳು ಲಂಗುಲಗಾಮು ಇಲ್ಲದೆ ವರ್ತಿಸುತ್ತಿದ್ದಾರೆ ಎಂಬುದಾಗಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ಅಕ್ರೋಶ ವ್ಯಕ್ತಪಡಿಸಿದರು.

           ನಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲ್ಲೂಕಿನ ಬರ ನಿರ್ವಹಣೆ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

       ಜನಪ್ರತಿನಿಧಿ ಮಾತಿಗೆ ಮನ್ನಣೆ ಕೊಡದಿದ್ದ ಇನ್ನು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಈ ಅಧಿಕಾರಿಗಳು ಸ್ಪಂದಿಸುವರೇ ಎಂಬುದಾಗಿ ಸಭೆಯಲ್ಲಿ ಪ್ರಶ್ನಿಸಿದರಲ್ಲದೆ ಅಧಿಕಾರಿಗಳು ಅಹಂ ಬಿಟ್ಟು, ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ನೀಡಬೇಕು ಇಲ್ಲದಿದ್ದರೆ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದರು.

         ತಾಲೂಕಿನ ವಿವಿ ಸಾಗರ ಮತ್ತು ಗಾಯತ್ರಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಒಣಗಿದ ತೆಂಗಿನ ಮರಗಳಿಗೆ ಸರ್ಕಾರದಿಂದ 4ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಫಲಾನುಭವಿಗಳಿಗೆ ತಲುಪಿಸುವ ಕೆಲಸ ತುರ್ತು ಆಗಬೇಕು ಎಂಬುದಾಗಿ ಪೂರ್ಣಿಮಾ ಶ್ರಿನಿವಾಸ್ ಸೂಚಿಸಿದರಲ್ಲದೆ ಅವೈಜ್ಞಾನಿಕವಾಗಿ ಪರಿಹಾರ ಘೋಷಣೆ ಮಾಡಲಾಗಿದ್ದು, ಈ ಪರಿಹಾರದಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ.

        ಕನಿಷ್ಠ ಒಂದು ಮರಕ್ಕೆ 5ಸಾವಿರ ಪರಿಹಾರ ಕೊಡುವಂತೆ ಸಿಎಂ ಜತೆ ಚರ್ಚಿಸಲಾಗುವುದು ಎಂದರು. ರಾಜ್ಯಸರ್ಕಾರ ಕುಡಿವ ನೀರಿಗಾಗಿ ಪ್ರತಿ ತಾಲ್ಲೂಕಿಗೆ 50 ಲಕ್ಷ ರೂಗಳ ಅನುದಾನ ಘೋಷಿಸಿದ್ದು, ನಮ್ಮ ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತದಿಂದ ಕುಡಿವ ನೀರಿಗಾಗಿ ಹಾಹಾಕಾರ ಇದ್ದು, ಕೊಳವೆಬಾವಿ ಕೊರೆಸಿ ಪೈಪ್ಲೈನ್ ಮೋಟಾರ್ ಪಂಪ್, ವಿದ್ಯುತ್ ಸಂಪರ್ಕ ಸೇರಿ ಇತರ ಕೆಲಸಕ್ಕೆ ಹೆಚ್ಚು ಹಣ ವೆಚ್ಚವಾಗುವುದರಿಂದ 50 ಲಕ್ಷ ಅನುದಾನದಲ್ಲಿ ಕುಡಿವ ನೀರಿನ ನಿರ್ವಹಣೆ ಕಷ್ಟಸಾಧ್ಯ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

        ಗ್ರಾಯತ್ರಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಿದ್ದರೆ ಜಿಲ್ಲಾಧಿಕಾರಿ ಗಮನಕ್ಕೆ ತರುವಂತೆ ಶಾಸಕರು ಸೂಚಿಸಿದರು. ಅಚ್ಚುಕಟ್ಟು ಪ್ರದೇಶಕ್ಕೆ ಫೆಬ್ರವರಿ ತಿಂಗಳಲ್ಲಿ ನೀರು ಹರಿಸಿದರೆ ಏಪ್ರಿಲ್- ಮೇವರೆಗೆ ಬೆಳೆಗಳಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

         ಸಭೆಯಲ್ಲಿ ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ತಾ.ಪಂ.ಇಒ ರಾಮಕುಮಾರ್, ಬೆಸ್ಕಾಂ ಎಇಇ ತಿಮರಾಯಪ್ಪ, ಜಿ.ಪಂ. ಎಇಇ ಶ್ರೀರಂಗಪ್ಪ, ಲೋಕೆಶ್ ಶಾಸಕರ ಆಪ್ತ ಸಹಾಯಕ ನಿರಂಜನಮೂರ್ತಿ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link