ತುರುವೇಕೆರೆ:
ಪಟ್ಟಣ ಪಂಚಾಯಿತಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹ ಅಧ್ಯಕ್ಷತೆಯಲ್ಲಿ ಶುಕ್ರವಾರ 2019-20ನೇ ಸಾಲಿನ ಆಯ-ವ್ಯಯವನ್ನು ಮಂಡಿಸಲಾಯಿತು.
ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಬಜೆಟ್ ಸಭೆ ಫ್ರಾರಂಭವಾದ ನಂತರ ನಾಲ್ಕನೇ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಯಜಮಾನ್ ಮಹೇಶ್ ಬಜೆಟ್ ಪ್ರತಿ ಹಿಡಿದು ಸಬೆಯಲ್ಲಿ ವಿವರವಾಗಿ ಓದಿದರು. 2019-20ನೇ ಸಾಲಿನ ಒಟ್ಟು ಆದಾಯ 11.29.00.585ಕೋಟಿ ರೂಪಾಯಿಗಳಾಗಿದ್ದು 11.15.35.000ಕೋಟಿ ಖರ್ಚು, ಉಳಿತಾಯ 13.65.585. ಲಕ್ಷ ರೂಪಾಯಿಗಳು ಉಳಿತಾಯವಾಗಲಿದೆ ಎಂದು ತಿಳಿಸಿದರು.
ಬಜೆಟ್ ಮೇಲಿನ ಖರ್ಚ-ವೆಚ್ಚದ ಚರ್ಚೆಯಲ್ಲಿ ಶಾಸಕ ಮಸಾಲಾಜಯರಾಮ್ ಮಾತನಾಡಿ ಪಟ್ಟಣ ಪಂಚಾಯಿತಿ ಬಜೆಟ್‍ನಲ್ಲಿ ಹಲವು ವರ್ಷಗಳಿಂದ ನೆಲಗುದಿಗೆ ಬಿದ್ದಿರುವ ವಾಣಿಜ್ಯ ಸಂಕೀರ್ಣ ಮುಂದುವರಿದ ಕಾಮಗಾರಿಗೆ 1.90.00.000 ರೂಪಾಯಿಗಳು ಮೀಸಲಿಟ್ಟಿರುವುದು ಸಂತಸದ ವಿಚಾರ ಕಾಮಗಾರಿ ಪೂರ್ಣಗೊಳಿಸಲು ನಾನು ಸರ್ಕಾರದಿಂದ ಹೆಚ್ಚುವರಿ ಕಾಮಗಾರಿ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ವಿಜಯ್‍ಕುಮಾರ್ ಮಾತನಾಡಿ ಪಟ್ಟಣದ ಒಳ ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ಸರಿಪಡಿಸಿಕೊಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಎಲ್ಲಾ ಸದಸ್ಯರು ಮುಂದಾಗಬೇಕು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಸಕ ಮಸಾಲಾಜಯರಾಮ್ ಮಧ್ಯಪ್ರವೇಶಿಸಿ ಒಳಚರಂಡಿ ಸರಿಪಡಿಸುವ ನಿಟ್ಟಿನಲ್ಲಿ ನನ್ನ ಸಂಪೂರ್ಣ ಸಹಕಾರವಿದ್ದು ಸದಸ್ಯರು ಕೈ ಜೊಡಿಸಿದರೆ ಪೂರ್ಣಗೊಳಿಸುವ ಭರವಸೆ ನೀಡಿ. ಪಟ್ಟಣ ಪಂಚಾಯಿತಿ ಚುನಾವಣೆ ಸನಿಹದಲ್ಲಿದ್ದು ಒಳಚರಂಡಿ ವ್ಯವಸ್ಥೆ ಸರಿಪಡಿಸಿದರೆ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎನ್ನುವ ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ಬಜೆಟ್ ಸಭೆಯ ಮುಕ್ತಾಯಕ್ಕೂ ಮುನ್ನ ಸದಸ್ಯರುಗಳ ಸಲಹೆಯನ್ನು ಕೇಳದೆ ಅಲ್ಲದೆ ಪಟ್ಟಣ ಪಂಚಾಯಿತಿಗೆ ಮೊದಲ ಬಾರಿಗೆ ಆಗಮಿಸಿದ ತಹಶೀಲ್ದಾರ್‍ಗೆ ಸ್ವಾಗತ ಕೋರದೆ ಅತುರಾತುರವಾಗಿ ಸಭೆ ಮುಕ್ತಾಯಕ್ಕೆ ಮುಂದಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಶಾಸಕರು ಪುಲ್ ಕ್ಲಾಸ್ ತೆಗೆದುಕೊಂಡರು.
ಬಜೆಟ್ ಸಭೆಯಲ್ಲಿ ತಹಶೀಲ್ದಾರ್ ನಯೀಮ್ ಉನ್ನೀಸ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಬಸುಮ್, ಸದಸ್ಯರುಗಳಾದ ಶಶಿಶೇಖರ್, ಕೆ.ಟಿ.ಶಿವಶಂಕರ್, ಶ್ರೀನಿವಾಸ್, ನದೀಂ, ನವ್ಯಪ್ರಕಾಶ್, ಮಾನಸಪ್ರಸನ್ನ, ನೇತ್ರಾವತಿ ರಂಗಸ್ವಾಮಿ, ರುದ್ರೇಶ್, ಕೃಷ್ಣಮೂರ್ತಿ, ರಂಗನಾಥ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮುಂಜುಳಾದೇವಿ, ಇಂಜಿನಿಯರ್ ಸತ್ಯನಾರಾಯಣ್, ದೇವರಾಜು ಹಾಗು ಸಿಬ್ಬಂದಿವರ್ಗ ಸೇರಿದಮತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
