ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಆಡಳಿತವೇ ಗಣ್ಯರಾಜ್ಯ ವ್ಯವಸ್ಥೆಯ ಮೂಲಧೇಯ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ

          ರಾಷ್ಟ್ರದ ಬಹುಕೋಟಿ ಜನರ ಇಂದಿನ ಎಲ್ಲಾ ರೀತಿಯ ಸವಲತ್ತುಗಳ ಹಿಂದೆ ಅನೇಕ ರಾಷ್ಟ್ರ ನಾಯಕರ ತ್ಯಾಗ ಬಲಿದಾನಗಳು ಅಡಗಿವೆ. ಭಾರತ ಸ್ವಾತಂತ್ರ್ಯ ಪಡೆದ ನಂತರ ಆಡಳಿತಾತ್ಮಕ ದೃಷ್ಠಿಯಿಂದ ಗಣರಾಜ್ಯದ ವ್ಯವಸ್ಥೆ ಜಾರಿಯಾಗಿದ್ದು, ವಿಶ್ವಮಟ್ಟದಲ್ಲಿ ಇಂದು ಭಾರತ ತನ್ನದೇಯಾದ ವೈಶಿಷ್ಠ್ಯತೆಯನ್ನು ಹೊಂದಿದೆ ಎಂದು ಕ್ಷೇತ್ರದ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

        ಅವರು ಶನಿವಾರ ಇಲ್ಲಿನ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ 70ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನಾಡಿಗಾಗಿ ತಮ್ಮದೇಯಾದ ದಕ್ಷ ಸೇವೆಯನ್ನು ಸಲ್ಲಿಸಿದ ಗಣ್ಯರಿಗೆ ಭಾರತ ಸರ್ಕಾರ ಭಾರತ್ನ ರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿದೆ. ಇಂತಹ ಪ್ರಶಸ್ತಿಗಳನ್ನು ಪಡೆಯಲು ಅವರು ಮಾಡಿರುವ ಸಾಧನೆಯೇ ಕಾರಣವಾಗಿದೆ. ನಾವೆಲ್ಲರೂ ಇಂತಹ ಮಹಾನ್ ಸಾಧಕರ ಆದರ್ಶಗಳನ್ನು ಪರಿಪಾಲನೆ ಮಾಡಬೇಕಿದೆ.

         ಶೌರ್ಯ ಸಾಧನೆಗೆ ನೀಡುವ ಪ್ರಶಸ್ತಿಯನ್ನು ನೆರೆಯ ಜಿಲ್ಲೆಯ ತುಮಕೂರಿನ ಯೋಧ ಎಂ.ಸಾಧಿಕ್‍ರವರಿಗೆ ಕೇಂದ್ರ ಸರ್ಕಾರ ಸೇನಾ ಪದಕ ನೀಡಿದೆ. ನಮ್ಮೆಲ್ಲರ ಸಂರಕ್ಷಣೆಗಾಗಿ ನಮ್ಮ ಯೋಧರು ಗಡಿಗಳಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಾರೆ. ನಾವೆಲ್ಲರೂ ಇಂತಹ ದೇಶ ರಕ್ಷಕರ ತ್ಯಾಗವನ್ನು ಅರಿತು ನಡೆಯಬೇಕೆಂದರು. ಪ್ರಸ್ತುತ ಮೈತ್ರಿ ಕೂಟದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದು, ಮುಂಬರುವ ದಿನಗಳಲ್ಲಿ ಈ ಸರ್ಕಾರ ಮತ್ತಷ್ಟು ಉತ್ತಮ ಸೌಲಭ್ಯಗಳನ್ನು ನೀಡಲಿದೆ ಎಂದರು.

        ಧ್ವಜರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ನಿರಂತರ ಬರಗಾಲದ ನಡುವೆಯೂ ಸಹ ನಾವೆಲ್ಲರೂ ದೇಶದ ಅಭಿಮಾನಿಗಳಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮಲ್ಲಿನ ದೇಶ ಪ್ರೇಮವನ್ನು ಗಟ್ಟಿಗೊಳಿಸಿದ್ದೇವೆ. ಪೂರ್ವಜನ್ಮದ ಪುಣ್ಯದ ಫಲವಾಗಿ ನಾವೆಲ್ಲರೂ ಇಂದು ಸುಶಕ್ಷಿತ ನಾಡಿನಲ್ಲಿ ಜೀವನ ನಡೆಸುತ್ತಿದ್ದೇವೆ. ನಮ್ಮೆಲ್ಲರಿಗೂ ನಮ್ಮ ರಾಷ್ಟ್ರದ ಸಂವಿಧಾನ ಮತ್ತು ಕಾನೂನು ಹಲವಾರು ಸೌಲಭ್ಯಗಳನ್ನು ನೀಡಿದೆ. ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಟಿ.ರಘುಮೂರ್ತಿಯವರ ಪರಿಶ್ರಮದ ಫವಾಗಿ ಅಭಿವೃದ್ಧಿಯ ನಾಡಾಗಿ ಪರಿವರ್ತನೆಯಾಗಿದೆ. ನಾವೆಲ್ಲರೂ ಈ ರಾಷ್ಟ್ರದ ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಶ್ರಮಿಸೋಣವೆಂದರು.

         ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕತಿಕ ಪಥ ಸಂಚಲನ, ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿದ್ದು, ತೀರ್ಪುಗಾರರಾಗಿ ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಬಿಆರ್‍ಸಿ ಆರ್.ಮಂಜಪ್ಪ ಕಾರ್ಯನಿರ್ವಹಿಸಿದರು.

          ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಜ್ಞಾನಧಾರ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಪಿರಮಿಡ್ ಪ್ರಥಮ ಬಹುಮಾನವನ್ನು ಗಳಿಸಿದ್ದು, ಶಾಸಕರೂ ಸೇರಿದಂತೆ ಎಲ್ಲಾ ಗಣ್ಯರು ಈ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಎರಡನೇ ಸ್ಥಾನ ಸ್ವಾಮಿವಿವೇಕಾನಂದ ಶಾಲೆಗೂ ಮೂರನೇ ಸ್ಥಾನ ಆದರ್ಶ ಶಾಲೆಗೂ ದೊರೆಯಿತು. ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಕಸ್ತೂರಿಬಾ ಶಾಲೆ, ದ್ವಿತೀಯ ಸ್ಥಾನ ಎಚ್‍ಟಿಟಿ ಬಾಲಕಿಯರ ಶಾಲೆ, ತೃತೀಯ ಸ್ಥಾಣ ಇವಿಕೆ ಪ್ರೌಢಶಾಲೆ ಪಡೆದರು. ವಾದ್ಯವೃಂದಲ್ಲಿ ಕುವೆಂಪು ಶಾಲೆ ಪ್ರಥಮ, ಜ್ಞಾನಾಧರ ಪ್ರೌಢಶಾಲೆ ದ್ವಿತೀಯ, ಹೆಗ್ಗೆರೆ ತಾಯಮ್ಮ ಪ್ರೌಢಶಾಲೆ ತೃತೀಯ ಸ್ಥಾನವನ್ನು ಪಡೆಯಿತು.

         ಕಸ್ತೂರಿ ಬಾ ಶಾಲೆಯ ಶಿಲ್ಪ ಎಂಬ ಅಂಕವಿಕಲೆ ವಿದ್ಯಾರ್ಥಿ ಜವಾಲಿನ್ ಥ್ರೋನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ತಂದುಕೊಟ್ಟಿದ್ದು, ಶಾಸಕರು ಈ ಬಾಲಕಿಯನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷೆ ಕೆ.ಕವಿತಾರಾಮಣ್ಣ, ಉಪಾಧ್ಯಕ್ಷೆ ತಿಪ್ಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಣ್ಣಸೂರಯ್ಯ, ಎಚ್.ಸಮರ್ಥರಾಯ, ಎಚ್.ಆಂಜನೇಯ, ಜಿ.ವೀರೇಶ್, ನಗರಸಭಾ ಸದಸ್ಯರಾದ ಸಾಕಮ್ಮ, ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ಸಿ.ಕವಿತಾ, ಓ.ಸುಜಾತ, ಸುಮಾ, ಪ್ರಮೋದ್, ಎಸ್.ಜಯಣ್ಣ, ಜಿ.ಕವಿತಾನಾಯಕಿ, ಹೊಯ್ಸಳಗೋವಿಂದ, ಸಿ.ಬಿ.ಜಯಲಕ್ಷ್ಮಿ, ಎಂ.ನಾಗಮಣಿ, ಸುಮಕ್ಕ, ಎಂ.ಜೆ.ರಾಘವೇಂದ್ರ, ಜಿ.ಎಂ.ಕವಿತಾ, ಎಂ.ಸಾವಿತ್ರಿ, ತಿಪ್ಪಮ್ಮ, ಎಚ್.ಸಿ.ವಿರೂಪಾಕ್ಷ, ಆರ್.ಮಂಜುಳಾ, ಚಳ್ಳಕೆರೆಯಪ್ಪ, ಶ್ರೀನಿವಾಸ್, ರಮೇಶ್‍ಗೌಡ, ಪಾಲಮ್ಮ, ಕೆ.ವೀರಭದ್ರಯ್ಯ,ವ ಪೌರಾಯುಕ್ತ ಜೆ.ಟಿ.ಹನುಮಂತರಾಜು, ಬಿಇಒ ವೆಂಕಟೇಶಪ್ಪ, ಡಾ.ಜಿ.ತಿಪ್ಪೇಸ್ವಾಮಿ, ಕೃಷಿ ಅಧಿಕಾರಿ ಮಾರುತಿ, ಪಶುವೈದ್ಯಾಧಿಕಾರಿ ಹನುಮಪ್ಪ, ಸಿಡಿಪಿಒ ಗಿರಿಜಾಂಬ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಬಿಸಿಎಂ ಅಧಿಕಾರಿ ಜಗನ್ನಾಥ, ಬೆಸ್ಕಾಂ ಅಧಿಕಾರಿ ಶಿವಪ್ರಸಾದ್, ಅಬಕಾರಿ ಅಧಿಕಾರಿ ತುಕರಾಮ್ ನಾಯ್ಕ, ಅರಣ್ಯಾಧಿಕಾರಿ ಸುರೇಶ್, ಮಾಲತಿ, ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ಕಂದಾಯಾಧಿಕಾರಿ ಶರಣಬಸಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap