ನವದೆಹಲಿ:

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಟ್ಟಕ್ಕೇರಿರುವ ಪ್ರಿಯಾಂಕಾ ಗಾಂಧಿ ಅವರು ಬೈಪೋಲಾರ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಜನರನ್ನು ಥಳಿಸುತ್ತಾರೆ ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿರುವುದು ಹೊಸ ವಿವಾದ ಸೃಷ್ಟಿ ಮಾಡಿದೆ.
“ಪ್ರಿಯಾಂಕಾ ಅವರು ಬೈಪೋಲಾರ್ ನಿಂದ ಬಳಲುತ್ತಿದ್ದಾರೆ.ಅವರು ಜನರನ್ನು ಥಳಿಸುತ್ತಾರೆ.ಅವರ ಕಾಯಿಲೆಯು ಅವರಿಗೆ ಸಾರ್ವಜನಿಕ ಜೀವನವನ್ನು ಯಶಸ್ವಿಯಾಗಿ ಮುನ್ನಡೆಸಲು ಬಿಡುವುದಿಲ್ಲ. ಆಕೆ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನುವುದನ್ನು ಜನರು ಅರಿತಿರಬೇಕು” ಎಂದು ಸ್ವಾಮಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
