ಬೆಂಗಳೂರು
ಬಂಧಿಸಲು ಬೆನ್ನಟ್ಟಿ ಬಂದ ಪೊಲೀಸರಿಗೆ ಲಾಂಗ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ರೌಡಿ ಗೌತಮ್ ಅಲಿಯಾಸ್ ಆರ್ಮುಗಂಗೆ ಯಶವಂತಪುರ ಪೊಲೀಸರು ಗುಂಡು ಹೊಡೆದಿದ್ದಾರೆ.
ಪೊಲೀಸರು ಹಾರಿಸಿದ ಗುಂಡು ಬಲಗಾಲಿಗೆ ತಗುಲಿ ಗಾಯಗೊಂಡಿರುವ ಯಶವಂತಪುರ ಮಾಡೆಲ್ ಕಾಲೋನಿಯ ರೌಡಿ ಗೌತಮ್(22)ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಂಧಿಸಲು ಹೋದಾಗ ರೌಡಿ ಗೌತಮ್ ಲಾಂಗ್‍ನಿಂದ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಯಶವಂತಪುರ ಠಾಣೆಯ ಪೇದೆಗಳಾದ ಶಿವಕುಮಾರ್ ಹಾಗೂ ಭಜಂತ್ರಿ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ
ಕಳೆದ ಜ.24ರಂದು ರಾತ್ರಿ 7ರ ವೇಳೆ ಯಶವಂತಪುರ ರೈಲ್ವೆ ನಿಲ್ದಾಣ ಬಳಿಯ ಮಾಡೆಲ್ ಕಾಲೋನಿ ಬಳಿ ಪಾರ್ಟಿ ಮುಗಿದ ನಂತರ ನಡೆದ ಜಗಳದಲ್ಲಿ ರೌಡಿ ಗೌತಮ್ ಮತ್ತವನ ಸ್ನೇಹಿತರಾದ ಸಲ್ಮಾನ್ ಹಾಗೂ ಪ್ರಶಾಂತ್ ಪರಿಚಯಸ್ಥರಾದ ಚಿಲ್ಲರೆ ಅಂಗಡಿ ನಡೆಸುತ್ತಿದ್ದ ವಿನೋದ್‍ಕುಮಾರ್ ತರಕಾರಿ ವ್ಯಾಪಾರಿಯಾಗಿದ್ದ ಮಾರುತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು.
ಕೃತ್ಯವನ್ನು ನೋಡಿದ ಸ್ಥಳೀಯರು ರಕ್ಷಣೆಗೆ ಧಾವಿಸಿದ ಕೂಡಲೇ ಗೌತಮ್ ಸೇರಿ ಮೂವರು ಪರಾರಿಯಾಗಿದ್ದರು,ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಯಶವಂತಪುರ ಪೊಲೀಸರು ಪರಾರಿಯಾಗಿದ್ದ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದರು ಎಂದು ಡಿಸಿಪಿ ಚೇತನ್‍ಸಿಂಗ್ ರಾತೋರ್ ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ರಚಿಸಿಲಾಗಿದ್ದ ವಿಶೇಷ ಪೊಲೀಸ್ ತಂಡಕ್ಕೆ ರೌಡಿ ಗೌತಮ್ ಮತ್ತವನ ಸ್ನೇಹಿತರಾದ ಸಲ್ಮಾನ್ ಹಾಗೂ ಪ್ರಶಾಂತ್ ಜೊತೆ ನಿನ್ನೆ ರಾತ್ರಿ 2ರ ವೇಲೆ ಪೈಪ್‍ಲೇನ್‍ನ ಫ್ಲಾಟಿನಂ ಸಿಟಿ ನ್ಯಿರುವ ಮಾಹಿತಿ ಪತ್ತೆಯಾಯಿತು.
ಯಶವಂತಪುರ ಪೊಲೀಸ್ ಇನ್ಸ್‍ಪೆಕ್ಟರ್ ಮುದ್ದುರಾಜ್ ಅವರು ಪೇದೆಗಳಾದ ಶಿವಕುಮಾರ್ ಹಾಗೂ ಭಜಂತ್ರಿ ಇನ್ನಿತರ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡು ಗೌತಮ್‍ನನ್ನು ನೋಡಿ ಬೆನ್ನಟ್ಟಿ ಬಂಧಿಸಲು ಬಂದ ಪೇದೆಗಳಾದ ಶಿವಕುಮಾರ್ ಹಾಗೂ ಭಜಂತ್ರಿ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿದ್ದಾನೆ.
ಇನ್ಸ್‍ಪೆಕ್ಟರ್ ಮುದ್ದುರಾಜ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಮತ್ತೆ ಲಾಂಗ್ ಹಿಡಿದು ಬಂದಾಗ ಸ್ವಯಂ ರಕ್ಷಣೆಗಾಗಿ ಮತ್ತೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.
ಬಲಗಾಲಿಗೆ ಒಂದು ಗುಂಡು ತಗುಲಿ ಸ್ಥಳದಲ್ಲಿಯೇ ಕುಸಿದುಬಿದ್ದ ಗೌತಮ್‍ನನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ,ಗೌತಮ್ ಇಬ್ಬರು ಮಹಿಳೆಯರ ಮೇಳೆ ಹಲ್ಲೆ,ಮೂರು ಕೊಲೆಯತ್ನ,ಕಳ್ಳತನ ಸೇರಿ 7 ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಯಶವಂತಪುರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದಾನೆ ರೌಡಿ ಗೌತಮ್ ಜೊತೆಗಿದ್ದ ಸ್ನೇಹಿತರಾದ ಸಲ್ಮಾನ್ ಹಾಗೂ ಪ್ರಶಾಂತ್ ಪರಾರಿಯಾಗಿದ್ದು ಅವರ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಬ್ಬರು ಮಹಿಳೆಯರ ಮೇಳೆ ಹಲ್ಲೆ,ಮೂರು ಕೊಲೆಯತ್ನ,ಕಳ್ಳತನ,ಹಲ್ಲೆ,ಬೆದರಿಕೆ ಸೇರಿ 7 ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಯಶವಂತಪುರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ಗೌತಮ್ ಯಶವಂತಪುರ ರೈಲ್ವೆ ನಿಲ್ದಾಣ ಬಳಿಯ ವ್ಯಾಪಾರಿಗಳಿಗೆ ಬೆದರಿಸುತ್ತಿದ್ದ ಪರಿಚಯಸ್ಥರ ಮೇಲೆ ಕೊಲೆಯತ್ನ ನಡೆಸಿ ಸವಾಲಾಗಿ ಪರಿಣಮಿಸಿದ್ದು ಆತನ ಬಂಧನಕ್ಕೆ ರಚಿಸಲಾಗಿದ್ದ ತಂಡವು ಕಾರ್ಯಾಚರಣೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








