ದಾವಣಗೆರೆ:
ಡಾ.ಹೆಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದ ದಾವಣಗೆರೆ ಘಟಕದ ವತಿಯಿಂದ ಇಂದು (ಜ.29 ರಂದು) ಮಧ್ಯಾಹ್ನ 3 ಗಂಟೆಗೆ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಪುಸ್ತಕ ಪಂಚಮಿ ದಶಮಾನೋತ್ಸವ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಮ್ಮೇಳನದ ಸಹ ಸಂಚಾಲಕ ಡಾ.ಸಿ.ಆರ್.ಬಾಣಾಪುರಮಠ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಪೂಜಿ ವಿದ್ಯಾ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ, ಬಾಪೂಜಿ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ಉಪ ಉಪ ಪ್ರಾಂಶುಪಾಲ ಜಿ.ಎಸ್.ಪರಮೇಶ್ವರಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿಷ್ಠಾನದ ಸಂಚಾಲಕ ಸಿ.ಎಸ್.ಹಿರೇಮಠ ಮಾತನಾಡಿ, ಶಿಕ್ಷಣದ ಗುಣಾತ್ಮಕತೆ ಹೆಚ್ಚಿಸುವ ಹಾಗೂ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮ ಪರೀಕ್ಷೆ ಎದುರಿಸಲು ಅಣಿಗೊಳಿಸುವ ಉದ್ದೇಶದಿಂದ, ನಮ್ಮ ಪ್ರತಿಷ್ಠಾನದಿಂದ ದತ್ತಿ ಸ್ಥಾಪಿಸಿ, ಆ ದತ್ತಿಯ ಹಣದಲ್ಲಿ ಬರುವ ಬಡ್ಡಿಯಲ್ಲಿ ಮಕ್ಕಳಿಗೆ ವಿವಿಧ ಪುಸ್ತಕ ವಿತರಿಸುವ ಯೋಜನೆ ಆರಂಭಿಸಿ 10 ವರ್ಷ ಕಳೆದಿದೆ ಎಂದು ತಿಳಿಸಿದರು.
ಪ್ರತಿಷ್ಠಾನದಲ್ಲಿ ಒಟ್ಟು 150 ದತ್ತಿಗಳು ಸ್ಥಾಪನೆಯಾಗಿದ್ದು, ಈ ಪೈಕಿ ದಾವಣಗೆರೆಯ ಘಟಕದ ಅಡಿಯಲ್ಲಿ ಒಟ್ಟು 32 ದತ್ತಿ ಸ್ಥಾಪನೆಯಾಗಿದೆ. ಇದರಲ್ಲಿ 21 ದತ್ತಿದಾನಿಗಳು ಬಯಸಿದ ಜಿಲ್ಲೆಯ ಸುಮಾರು 9 ಶಾಲೆಗಳ ವಿದ್ಯಾರ್ಥಿಗಳಿಗೆ ಹಾಗೂ ಇನ್ನೂ 11 ದತ್ತಿ ದಾನಿಗಳು ಬಯಸಿದ ದಾವಣಗೆರೆ ಜಿಲ್ಲೆಯನ್ನು ಹೊರತು ಪಡಿಸಿ, ಬೇರೆ, ಬೇರೆ ತಾಲೂಕುಗಳ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುತ್ತಾ ಬರಲಾಗಿದೆ ಎಂದು ಅವರು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಸೋಮಶೇಖರ್ ಎಂ.ಹಿರೇಮಠ್, ವಿ.ಸಿ.ಪುರಾಣಿಕ್ ಮಠ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
