ಆಸ್ಟ್ರೇಲಿಯಾ:
ಬ್ರಿಸ್ಬೇನ್ ನಗರದ ಮನೆಯೊಂದರ ಕಮೋಡ್ನಲ್ಲಿ ನಡೆದ ಘಟನೆ ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮಧ್ಯರಾತ್ರಿ ಮಹಿಳೆಯೊಬ್ಬಳು ಟಾಯ್ಲೆಟ್ಗೆ ತೆರಳಿದ್ದಾಗ, ಈ ವೇಳೆ ಕಮೋಡ್ ಒಳಗೆ ಕುಳಿತಿದ್ದ ಹಾವೊಂದು ಮಹಿಳೆಯನ್ನು ಕಚ್ಚಿದೆ. ಕಮೋಡ್ ಒಳಗೆ ಹಾವು ಇರುವುದನ್ನು ಗಮನಿಸದ ಮಹಿಳೆ ಕಮೋಡ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ಹಾವು ಆಕೆಗೆ ಕಚ್ಚಿದೆ ಎಂದು ತಿಳಿದು ಬಂದಿದೆ .
59 ವರ್ಷದ ಹೆಲೆನ್ ರಿಚರ್ಡ್ಸ್ ಎಂಬವರಿಗೆ ಈ ಹಾವು ಕಚ್ಚಿದೆ. ಮಂಗಳವಾರ ಈ ಘಟನೆ ನಡೆದಿದ್ದು, ಮಹಿಳೆ ಟಾಯ್ಲೆಟ್ಗೆ ಹೋದ ಸಂದರ್ಭದಲ್ಲಿ ಲೈಟ್ ಹಾಕದಿರುವುದೇ ಈ ಅನಾಹುತ ಸಂಭವಿಸಲು ಕಾರಣವೆನ್ನಲಾಗಿದೆ. ಹಾವು ವಿಷಕಾರಿಯಲ್ಲದಿರುವುದರಿಂದ ಯಾವುದೇ ಅಪಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸ್ನೇಕ್ ಕ್ಯಾಚರ್ಸ್ ಈ ಘಟನೆಯನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದು, ‘ಮಧ್ಯರಾತ್ರಿ ಕಮೋಡ್ ಮೇಲೆ ಕುಳಿತಿದ್ದ ಮಹಿಳೆಗೆ ತನಗ್ಯಾರೋ ಕೆಳಗಿನಿಂದ ಕಚ್ಚುತ್ತಿದ್ದಾರೆ ಎಂಬ ಅನುಭವವಾಗಿದೆ’. ತನಗೆ ಕಚ್ಚಿದ್ದು ಹಾವು ಎಂದು ತಿಳಿದ ಮಹಿಳೆ ಉರಗ ತಜ್ಞರನ್ನು ಕರೆಸಿ, ಅದನ್ನು ಕಮೋಡ್ನಿಂದ ಹೊರ ತಂದಿದ್ದಾರೆ. ಹೆಲೆನ್ರನ್ನು ಕಚ್ಚಿದ್ದು ಬರೋಬ್ಬರಿ 5 ಅಡಿ ಉದ್ದದ ಹಾವು ಎಂಬುವುದು ಮರೆಯುವಂತಿಲ್ಲ.
ತಮಗಾದ ಆನುಭವವನ್ನು ವಿವರಿಸಿದ ಹೆಲೆನ್ ‘ನನಗೇನೋ ಕಚ್ಚುತ್ತಿದೆ ಎಂದು ತಿಳಿಯುತ್ತಿದ್ದಂತೆಯೇ ನಾನು ಎದ್ದು ನಿಂತುಕೊಂಡೆ. ಕಮೋಡ್ ಒಳಗೆ ನೋಡಿದಾಗ ಹಾವಿತ್ತು’ ಎಂದು ತಿಳಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








