ಬೆಂಗಳೂರು
ಪಾನಿಪುರಿ ವ್ಯಾಪಾರದ ಜೊತೆಗೆ ಹಣದಾಸೆಗಾಗಿ ಮಾದಕ ವಸ್ತು ಓಫಿಮು ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಬಂಧಿಸಿರುವ ಬೆಳ್ಳಂದೂರು ಪೊಲೀಸರು 56 ಸಾವಿರ ಮೌಲ್ಯದ 750 ಗ್ರಾಂ ಓಫಿಮನ್ನು ವಶಪಡಿಸಿಕೊಂಡಿದ್ದಾರೆ.
ಪರಂಗಿ ಪಾಳ್ಯದ ಪಾನಿಪೂರಿ ವ್ಯಾಪಾರಿಶ್ಯಾಮ್ಲಾಲ್ (40)ನನ್ನು ಬಂಧಿಸಿ 52 ಸಾವಿರ ಮೌಲ್ಯದ 750 ಗ್ರಾಂ ಓಫಿಮನ್ನು ವಶಪಡಿಸಿಕೊಳ್ಳಲಾಗಿದೆ.ರಾಜಸ್ತಾನ ಮೂಲದ ಆರೋಪಿಯು ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಬಳಿ ಓಫಿಮು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯು ಪಾನೀಪುರಿ ಮಾರಾಟ ಮಾಡುವಾಗ ವಿದ್ಯಾರ್ಥಿಗಳು ಹಾಗೂ ಗಿರಾಕಿಗಳನ್ನು ಪರಿಚಯ ಮಾಡಿಕೊಂಡು ವ್ಯವಸ್ಥಿತವಾಗಿ ಓಫಿಮು ಮಾರಾಟ ಮಾಡುತ್ತಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ವೇಶ್ಯಾವಾಟಿಕೆ ಮೂವರ ಸೆರೆ
ಹೊರ ರಾಜ್ಯದಿಂದ ಯುವತಿಯರನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೋರಮಂಗಲದ 6ನೇ ಬ್ಲಾಕ್ನ ಮಹೇಶ್ (38), ಉತ್ತರಹಳ್ಳಿಯ ರಜಿತ್ (28), ಯಶವಂತಪುರದ ಶಿವರಾಜ್ (28) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಕೋರಮಂಗಲದ 6ನೇ ಬ್ಲಾಕ್ನ ಸೆಕೆಂಡ್ ಹೌಸ್ ಸರ್ವೀಸ್ ಗೆಸ್ಟ್ಹೌಸ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದ್ದು, ಪಶ್ಚಿಮಬಂಗಾಳ, ದೆಹಲಿ ಮೂಲದ ಯುವತಿಯರನ್ನು ರಕ್ಷಿಸಿ 6 ಮೊಬೈಲ್, 2 ಸಾವಿರ ನಗದು ವಶಪಡಿಸಿಕೊಂಡು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದಂಧೆಯಲ್ಲಿ ಪಾಲ್ಗೊಂಡಿದ್ದ ಇನ್ನಿತರ ಆರೋಪಿಗಳಿಗೆ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








