ವರ್ತಕರಿಂದ ದವಸ ದಾನ್ಯ ರವಾಣೆ

ಚಿತ್ರದುರ್ಗ:

        ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮಿಗಳ ಪುಣ್ಯಾರಾಧನೆಗೆ ಎ.ಪಿ.ಎಂ.ಸಿ.ವರ್ತಕರ ಸಂಘ ಹಾಗೂ ಸಮಸ್ತ ಭಕ್ತಾಧಿಗಳಿಂದ ಮಂಗಳವಾರ 200 ಕ್ವಿಂಟಾಲ್ ಅಕ್ಕಿ ಮತ್ತಿತರೆ ಸಾಮಾಗ್ರಿಗಳನ್ನು ಕಳಿಸಲಾಯಿತು

         ಇನ್ನೂರು ಕ್ವಿಂಟಾಲ್ ಅಕ್ಕಿ, 25 ಕ್ವಿಂಟಾಲ್ ತೊಗರಿಬೇಳೆ, 20 ಕ್ವಿಂಟಾಲ್ ಸಕ್ಕರೆ, 20 ಕ್ವಿಂಟಾಲ್ ರವೆ, ಐದು ಕ್ವಿಂಟಾಲ್ ಕಡಲೆಬೇಳೆ, 30 ಕ್ವಿಂಟಾಲ್ ಕಡಲೆಕಾಳು, 40 ಟಿನ್ ಎಣ್ಣೆಯನ್ನು ಎರಡು ಲಾರಿಗಳಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ರವಾನಿಸಲಾಯಿತು.

       ಎಲ್.ಐ.ಸಿ.ಮಹೇಶಣ್ಣ ಈ ಸಂದರ್ಭದಲ್ಲಿ ಮಾತನಾಡಿ ಇಡೀ ಎ.ಪಿ.ಎಂ.ಸಿ.ಯಲ್ಲಿ ಸುತ್ತಾಡಿ ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮಿಗಳ ಶ್ರದ್ದಾಂಜಲಿಗೆ ಅಕ್ಕಿ ಇನ್ನಿತರೆ ಆಹಾರ ಧಾನ್ಯಗಳನ್ನು ಸಂಗ್ರಹಿಸಿದಾಗ ಎಲ್ಲಾ ವರ್ತಕರು ಹಾಗೂ ಸಮಸ್ತ ಭಕ್ತಾಧಿಗಳು ಸಂತೋಷವಾಗಿ ಕೈಜೋಡಿಸಿದರು ಎಂದು ಸಂತಸ ವ್ಯಕ್ತಪಡಿಸಿದರು.

      ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ, ಮುರುಗೇಶ್‍ಗೌಡ್ರು, ಕೆ.ಇ.ಬಿ.ಷಣ್ಮುಖಪ್ಪ, ನಗರಸಭೆ ಸದಸ್ಯ ಸುರೇಶ್ ಸೇರಿದಂತೆ ಎ.ಪಿ.ಎಂ.ಸಿ.ವರ್ತಕರು ಹಾಗೂ ಭಕ್ತಾಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link