ಹಿರಿಯೂರು :
ನಮ್ಮ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ನಗರದ ನೈರ್ಮಲ್ಯ ಹೆಚ್ಚಿಸುವುದರ ಜೊತೆಗೆ ಉತ್ತಮ ಪರಿಸರ ಸೇರಿದಂತೆ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬಹುದು ಎಂಬುದಾಗಿ ನ್ಯಾಯಾಧೀಶರಾದ ಶ್ರೀ.ಸಂತೋಷ್, ಎಸ್.ಪಲ್ಲೇದ್ ಹೇಳಿದರು.
ನಗರದ ವೇದಾವತಿನಗರದಲ್ಲಿ, ಹಿರಿಯೂರು ನಗರಸಭೆ, ತಾಲ್ಲೂಕು ಕಾನೂನು ಸೇವಾಸಮಿತಿ, ವಕೀಲರಸಂಘ, ಆರೋಗ್ಯಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯಸ್ವಚ್ಛತಾದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು
ಆನಂತರ ನ್ಯಾಯಾಧೀಶರುಗಳು ಬಡಾವಣೆಯ ಅಂಗಡಿಗಳು, ಬೇಕರಿಗಳು ಹಾಗೂ ಹೋಟೆಲ್‍ಗಳ ಬಳಿ ತೆರಳಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು. ಅಲ್ಲದೆ ಕಸಗಳ ವಿಂಗಡಣೆ ಕುರಿತಂತೆ, ಹಸಿಕಸ, ಒಣಕಸ ವಿಂಗಡಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳಾದ ಶ್ರೀಮತಿ.ಎನ್.ಬಿ.ಶೇಕ್, ಬಿ.ಜಿ. ಮನುಪಟೇಲ್, ಶ್ರೀಮತಿ ಮುನಿರತ್ನಮ್ಮ ಮತ್ತು ನಗರಸಭೆ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಉಪಾಧ್ಯಕ್ಷರಾದ ಇಮ್ರಾನಾಬಾನು, ನಗರಸಭೆ ಆಯುಕ್ತರಾದ ಮಹಂತೇಶ್, ಮತ್ತು ವಕೀಲರುಗಳಾದ ಎ.ಮಹಾಲಿಂಗಪ್ಪ, ಟಿ.ಜಗದೀಶ್ ಎಸ್.ಈರಣ್ಣ, ಟಿ.ದೃವಕುಮಾರ್ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.