ಕುಣಿಗಲ್
ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದ ಹಲವೆಡೆ ಭಕ್ತಿ ಸಮರ್ಪಣೆ ಅರ್ಪಿಸಿ ಭಕ್ತರಿಗೆ ಅನ್ನ ಸಂತರ್ಪಣೆಯನ್ನ ಏರ್ಪಡಿಸಲಾಗಿತ್ತು.
ಸರ್ಕಾರಿ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ನೌಕರಿ ವರ್ಗದವರು ಪರಮಪೂಜ್ಯ ಶ್ರೀ.ಡಾ ಶಿವಕುಮಾರಸ್ವಾಮೀಜಿಯವರ ಪುಣ್ಯಸ್ಮರಣೆ ಮಾಡುತ್ತಾ, ಬೆಳಿಗ್ಗೆಯಿಂದಲೇ ಭಕ್ತರಿಗೆ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನ್ನ ಸಂತರ್ಪಣೆಯನ್ನ ನೆರವೇರಿಸಿದರು. ಪಟ್ಟಣದ ಆಸ್ಪತ್ರೆ ಪಕ್ಕದಲಿ,್ಲ ತಾಲ್ಲೂಕು ಟ್ಯಾಕ್ಸಿ ಚಾಲಕರ ಸಂಘ ಹಾಗೂ ಮಾಲೀಕರಿಂದ ಪುಣ್ಯ ಸ್ಮರಣೆ ಮಾಡಿ ಸಾವಿರಾರು ಜನರಿಗೆ ಅನ್ನ ಸಂತರ್ಪಣೆಯನ್ನ ಮಾಡಿದರು. ಸಂತೆಬೀದಿ, ಅಟವಿಸ್ವಾಮಿ ದೇವಸ್ಥಾನದ ಬಳಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯ ಆರಾಧನೆ ಮಾಡಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








